National

India Covid Update : 24 ಗಂಟೆಯಲ್ಲಿ 3,06,064 ಮಂದಿಗೆ ಸೋಂಕು

ನವದೆಹಲಿ : ಭಾರತದಲ್ಲಿ ಕೊರೊನಾ ಮೂರನೇ ಅಲೆ ಸಾಕಷ್ಟು ತೊಂದರೆ ಸೃಷ್ಠಿಸುತ್ತಿದೆ. ಕೇಸ್‌ಗಳ ಸಂಖ್ಯೆಯಲ್ಲಿ ಏರಿಕೆ ಕಾಣ್ತಿದೆ ಹಾಗೆಯೇ ಗುಣಮುಖರಾಗುವವರ ಸಂಖ್ಯೆ ಇಳಿಮುಖವಾಗ್ತಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕಳೆದ 24 ಗಂಟೆಯಲ್ಲಿ 3,06,064 ಹೊಸ ಕೋವಿಡ್‌ ಕೇಸ್‌ಗಳು ಪತ್ತೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಸ್ವಲ್ಪ ಕೇಸ್‌ಗಳು ಕಮ್ಮಿ ಬಂದಿವೆ. ನೆನ್ನೆ 3.33 ಲಕ್ಷ ಕೇಸ್‌ಗಳು ವರದಿಯಾಗಿದ್ದವು. ಇದೇ ಅವಧಿಯಲ್ಲಿ ಕೋವಿಡ್‌ ನಿಂದ 439 ಮಂದಿ ಮೃತ ಪಟ್ಟಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಈ ಮಾಹಿತಿಯನ್ನು ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದೆ. ದೈನಂದಿನ ಪಾಸಿಟಿವಿಟಿ ರೇಟ್‌ ಶೇ. 20.75ರಷ್ಟಿದೆ, ಇನ್ನು ವಾರದ ಪಾಸಿಟಿವಿಟಿ ರೇಟ್‌ 17.03ರಷ್ಟಿದೆ. ಇನ್ನು ಕಳೆದ 24 ಗಂಟೆಯಲ್ಲಿ 14,74,753 ಜನರನ್ನು ಕೋವಿಡ್‌ ಪರೀಕ್ಷೆ ಮಾಡಲಾಗಿದೆ.

Share Post