ಬಾರ್ಡರ್ನಲ್ಲಿ ಕಣ್ಮರೆಯಾಗಿದ್ದ 17ವರ್ಷದ ಬಾಲಕ ಸೇಫ್:ಚೀನಾ
ಅರುಣಾಚಲಪ್ರದೇಶ: ಗಡಿಯಲ್ಲಿ ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕನ ಸುಳಿವು ಪತ್ತೆಯಾಗಿದೆ. ಕಾಣೆಯಾಗಿದ್ದ ಬಾಲಕ ತಮ್ಮ ಬಳಿ ಸುರಕ್ಷಿತವಾಗಿ ಇದ್ದಾನೆಂದು ಚೀನಾ ಸೇನೆ ಭಾರತ ರಕ್ಷಣಾ ಇಲಾಖೆಗೆ ಸಮಾಚಾರ ತಿಳಿಸಿದೆ. ಮೂರು ದಿನಗಳ ಬಾಲಕ ಮಿರಾನ್ ಟಾರೋನ್ ನಮ್ಮ ಕಣ್ಣಿಗೆ ಕಾಣಿಸಿದ್ದಾನೆ ಎಂದು ಆರ್ಮಿ ತಿಳಿಸಿದೆ. ಕೂಡಲೇ ಬಾಲಕನನ್ನು ಭಾರತಕ್ಕೆ ಕಳಿಸುವ ನಿಟ್ಟಿನಲ್ಲಿ ಅಗತ್ಯವಾದ ನಿಯಮಗಳನ್ನು ಪೂರ್ತಿಗೊಳಿಸಿ ಒಂದು ವಾರದಲ್ಲಿ ಆತನನ್ನು ಭಾರತಕ್ಕೊಪ್ಪಿಸುತ್ತೇವೆ ಎನ್ನಲಾಗಿದೆ.
ಅರುಣಾಚಲಪ್ರದೇಶದ ಸಿಯಾಂಗ್ ಜಿಲ್ಲೆಯ ಜೊಡೋ ಗ್ರಾಮದಿಂದ ಮಿರಾನ್ ಟಾರೋನ್ ಎಂಬ ಬಾಲಕ ಈ ತಿಂಗಳ 19ರಂದು ಕಾಣೆಯಾಗಿದ್ದ. ಬಾಳಕನನ್ನು ಚೀನಾಗೆ ಸೇರಿದ ಪೀಪಲ್ಸ್ ಲಿಬರೇಷನ್ ಆರ್ಮಿ ಕಿಡ್ನ್ಯಾಪ್ ಮಾಡಲಾಗಿದೆ ಎಂಬ ಆರೋಪಗಳು ಸಹ ಕೇಳಿಬಂದಿತ್ತು. ಅರುಣಾಚಲಪ್ರದೇಶ್ ಎಂಪಿ ತಾಪಿರ್ ಸಹ ಬಾಲಕನನ್ನು ಚೈನಾದವರು ಕಿಡ್ಯ್ನಾಪ್ ಮಾಡಿದ್ದಾರೆಂದು ಟ್ವೀಟ್ ಕೂಡ ಮಾಡಿದ್ರು. ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗಿತ್ತು. ಆದಷ್ಟು ಬೇಗ ಬಾಲಕನನ್ನು ಬಿಡಿಸಬೇಕೆಂದು ಮನವಿ ಕೂಡ ಮಾಡಲಾಗಿತ್ತು. ಹೀಗಿರುವಾಗ ಈ ಬಾಲಕ ಪರಿಚಯಸ್ಥರ ಜೊತೆಗೂಡಿ ಕೆಲವೊಂದು ಗಿಡಮೂಲಿಕೆಗಳಿಗಾಗಿ ಅರುಣಾಚಲ ಪ್ರದೇಶದ ಸುತ್ತಮುತ್ತಾ ಹುಡುಕಾಟಕ್ಕೆ ತೆರಳಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ರು. ಈ ಹುಡುಕಾಟದಲ್ಲಿ ಎಲ್ಲರೂ ತಪ್ಪಿಸಿಕೊಂಡಿದ್ದು, ಟಾರೋನ್ನನ್ನು ಮಾತ್ರ ಪಿಎಲ್ಎ ಅಪಹರಿಸಿರುವುದಾಗಿ ಆರೋಪಿಸಿದ್ದರು.