Cinema

ಆಸ್ಕರ್‌ ರೇಸ್‌ನಲ್ಲಿ ಜೈಭೀಮ್‌ ಮತ್ತು ಮರಕ್ಕರ್

ಭಾರತ ಚಿತ್ರರಂಗದ ಬಹು ವರ್ಷದ ಕನಸು ಈ ಸಿನಿಮಾಗಳ ಮೂಲಕವಾದರೂ ನೆರವೇರುತ್ತಾ ಕಾದು ನೋಡಬೇಕಿದೆ. ಆಸ್ಕರ್‌ ಅವಾರ್ಡ್ಸ್‌ ನೀಡುವ ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ಸ್‌ ಆರ್ಟ್ಸ್‌ ಅಂಡ್‌ ಸೈನ್ಸ್‌ ಈ ಬಾರಿ ಆಸ್ಕರ್‌ ರೇಸ್‌ನಲ್ಲಿರುವ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ.

ತಮಿಳಿನ ಜೈಭೀಮ್‌ ಮತ್ತು ಮಲುಯಾಳಂನ ಮರಕ್ಕರ್‌ ಸಿನಿಮಾಗಳು ಈ ಬಾರಿಯ ಆಸ್ಕರ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಒಟ್ಟು  276 ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದ್ದು ಭಾರತದಿಂದ ಎರಡು ಸಿನಿಮಾಗಳು ಸೆಲೆಕ್ಟ್‌ ಆಗಿರೋದು ವಿಶೇಷವಾಗಿದೆ.

94ನೇ ಅಕಾಡೆಮಿ ಅವಾರ್ಡ್ಸ್‌ ಕಾರ್ಯಕ್ರಮ ಇದೇ ಮಾರ್ಚ್ 27ರಂದು ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದೆ. ಈ ಬಾರಿಯಾದರೂ ಭಾರತದ ಸಿನಿಮಾಗೆ ಆಸ್ಕರ್‌ ಬರುತ್ತದೆಯಾ ಎಂದು ಕಾದು ನೋಡಬೇಕಿದೆ.

ಆಸ್ಕರ್‌ ರೇಸ್‌ನಲ್ಲಿ ಇರುವ ಕಾರಣ ಸಿನಿಮಾ ತಂಡಗಳು ಸಂತೋಷ ಹಂಚಿಕೊಂಡಿವೆ.

Share Post