Districts

ಪಿಎಸ್‌ಐ ಹುದ್ದೆಗೆ ಒಟ್ಟಿಗೆ ಆಯ್ಕೆಯಾದ ಅಣ್ಣ ತಂಗಿ

ರಾಯಚೂರು : ರಾಯಚೂರಿನ ಲಿಂಗಸುಗೂರು ತಾಲೂಕಿನ ಅಣ್ಣ ತಂಗಿ ಒಟ್ಟಿಗೆ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಕಾರ್ತಿಕ್‌ ರಾಥೋಡ್‌ ಮತ್ತು ರೂಪಾ ರಾಥೋಡ್‌ ಆಶಿಹಾಳ ತಾಂಡದವರಾಗಿದ್ದಾರೆ. ಈ ಇಬ್ಬರು ಒಂದೇ ಬಾರಿಗೆ ತೇರ್ಗಡೆಯಾಗುವ ಮೂಲಕ ತಾಂಡಾದ ಕೀರ್ತಿ ಹೆಚ್ಚಿಸಿದ್ದಾರೆ.

2021ಅಕ್ಟೋಬರ್‌ನಲ್ಲಿ ನಡೆದ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ ಹುದ್ದೆಯ ಪರೀಕ್ಷೆಯನ್ನು ರೂಪಾ ಮತ್ತು ಕಾರ್ತಿಕ್‌ ಇಬ್ಬರು ಕೂಡ ಎದುರಿಸಿದ್ದರು. ರೂಪಾ ಮತ್ತು ಕಾರ್ತಿಕ್‌ ಅವರು ಬಿಎಸ್ಸಿ ಓದಿದ್ದಾರೆ. ಪರೀಕ್ಷೆಯಲ್ಲಿ ರೂಪಾ 46ನೇ ರ್ಯಾಂಕ್‌ ಪಡೆದರೆ ಕಾರ್ತಿಕ್‌ 78ನೇ ರ್ಯಾಂಕ್‌ ಪಡೆದಿದ್ದಾನೆ.

ಕಿರಿಯ ಮಹಾವಿದ್ಯಾಲಯದಲ್ಲಿ ಪ್ರಚಾರ್ಯರಾಗಿರುವ ಶಂಕರ್‌ ರಾಥೋಡ್‌ ಮಕ್ಕಳಾಗಿರುವ ಈ ಇಬ್ಬರ ಸಾಧನೆಗೆ ತಂದೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Share Post