ಕೊವಿಡ್ ಬಂದವರಿಗೆ 3 ತಿಂಗಳ ನಂತರ ಬೂಸ್ಟರ್ ಡೋಸ್; ಕೇಂದ್ರದ ಹೊಸ ರೂಲ್ಸ್
ನವದೆಹಲಿ: ಕೊರೊನಾ ಬಂದು ಗುಣಮುಖರಾದವರಿಗೆ ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.
ಕೇಂದ್ರ ಆರೋಗ್ಯ ಇಲಾಖೆ ಈಗಾಗಳೇ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದೆ. ೬೦ ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ. ಜನವರಿ ೩ ರಿಂದ ಬೂಸ್ಟರ್ ಡೋಸ್ ನೀಡಲು ಚಾಲನೆ ನೀಡಲಾಗಿದೆ. ಆದರೆ ಕೊರೊನಾ ಬಂದು ಹೋದ ನಂತರ ಮೂರು ತಿಂಗಳು ಲಸಿಕೆ ನೀಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಈ ಹಿನ್ನೆಲೆಯಲ್ಲಿ ಕೊವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಬೂಸ್ಟರ್ ಡೋಸ್ ಮೂಡಲು ಮೂರು ತಿಂಗಳು ಬೇಕಾಗುತ್ತದೆ. ಹೀಗಾಗಿ, ಅರ್ಹ ವ್ಯಕ್ತಿಗಳಿಗೆ ಇದನ್ನು ಮನವರಿಕೆ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿದೆ.