Cinema

ಚಿತ್ರೀಕರಣ ಮುಗಿಸಿದ ಪುನೀತ್‌ ಸಿನಿಮಾ ಜೇಮ್ಸ್‌

ಬೆಂಗಳೂರು : ಅಪ್ಪು ಅಭಿನಯದ ಯಾವುದೇ ಸಿನಿಮಾ ಆದರೂ ಅದು ಹೈಪ್‌ ಕ್ರಿಯೇಟ್‌ ಮಾಡಿ ಬಿಡುತ್ತದೆ. ಆದರೆ ಅವರು ಕಾಲವಾದ ಮೇಲೆ ಬಿಡುಗಡೆಗೊಳ್ಳುತ್ತಿರುವ ಜೇಮ್ಸ್‌ ಸಿನಿಮಾಗೆ ಹೈಪ್‌ ಇನ್ನು ದುಪ್ಪಟ್ಟು ಆಗಿದೆ.

ಪುನೀತ್‌ ಅವರ ಅಭಿನಯದ ಕೊನೆ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳು ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದಾರೆ. ಆದಷ್ಟು ಬೇಗ ತೆರೆಗೆ ಬರಲು ಸಜ್ಜಾಗುತ್ತಿರುವ ಜೇಮ್ಸ್‌ ಸಿನಿಮಾ ತನ್ನ ಚಿತ್ರೀಕರಣ ಮುಗಿಸಿದೆ.

ಪುನೀತ್‌ ಅವರ ಪಾಲಿನ ಚಿತ್ರೀಕರಣ ಮೊದಲೇ ಮುಕ್ತಾಯವಾಗಿತ್ತು. ಈಗ ಬಾಕಿ ಇದ್ದ ಭಾಗವನ್ನು ಚಿತ್ರೀಕರಿಸಲಾಗಿದೆ. ಕುಂಬಳಕಾಯಿ ಒಡೆಯುವ ದಿನದ ಫೋಟೋದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಅವರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಇನ್ನು ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರು ಧ್ವನಿ ನೀಡಲಿದ್ದಾರೆ ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಪುನೀತ್‌ ಅವರ ಹುಟ್ಟು ಹಬ್ಬಕ್ಕೆ ಸಿನಿಮಾ ತೆರೆ ಮೇಲೆ ತರಲು ತಂಡ ಸಜ್ಜಾದಂತೆ ಕಾಣ್ತಿದೆ. ಸದ್ಯದಲ್ಲೇ ಎಲ್ಲಾ ವಿಷಯಗಳಿಗೂ ಉತ್ತರ ಸಿಗಲಿದೆ.

ಮೊದಲ ಬಾರಿಗೆ ಚೇತನ್‌ ಕುಮಾರ್‌ ಪುನೀತ್‌ ಅವರ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಸಾಂಗ್ಸ್‌ ಮತ್ತು ಸಖತ್‌ ಆಕ್ಷನ್‌ ಸೀನ್ಸ್‌ ತೆಗೆಯುವುದರಲ್ಲಿ ಚೇತನ್‌ ನಿಸ್ಸೀಮರು. ಈ ಸಿನಿಮಾದಲ್ಲಿ ಏನು ಮಾಡಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೂ ಇದೆ.

Share Post