Crime

ಪೊಲೀಸರು ಬರುತ್ತಾರೆಂಬ ಭಯ; ಪತ್ನಿ ಮೃತದೇಹ ಹೊತ್ತೊಯ್ದ ಭೂಪ..!

ಬಿಹಾರ: ಇಲ್ಲಿನ ವೈಶಾಲಿಯ ಹಾಜಿಪುರ್​ ಸದರ್​ ಆಸ್ಪತ್ರೆಯಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವವನ್ನು ಹೊತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಬಿದುಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡಿದ್ದಾರೆ. ಇದನ್ನು ನೋಡಿದ ಆಕೆ ಪತಿ, ಆಕೆಯನ್ನು ಕೆಳಗಿಳಿಸಿ ಭಜದ ಮೇಲೆ ಹೊತ್ತುಕೊಂಡೇ ಆಸ್ಪತ್ರೆಗೆ ಬಂದಿದ್ದ. ಆದ್ರೆ ವೈದ್ಯರು, ಮಹಿಳೆ ದಾಗಲೇ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.

   ಮಹಿಳೆ ಸಾವು ಅನುಮಾನಾಸ್ಪದವಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಆದ್ರೆ ಮೃತಳ ಗಂಡನಿಗೆ ಅದೇನನಿಸಿತೋ ಏನೋ ಪೊಲೀಸರು ಬರುತ್ತಾರೆಂದು ಗೊತ್ತಾದ ತಕ್ಷಣ, ಮೃತದೇವನ್ನು ಭುಜದ ಮೇಲೆ ಹೊತ್ತುಕೊಂಡು ಪರಾರಿಯಾಗಿದ್ದಾನೆ. ಈ ದೃಶ್ಯ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Share Post