ವೀಕೆಂಡ್ ಕರ್ಫ್ಯೂ ಇಲ್ಲ; ಬೆಂಗಳೂರಲ್ಲಿ ಜ.29ರವರೆಗೆ ಶಾಲೆ ಬಂದ್
ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ತೆರವುಗೊಳಿಸಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಕೊರೊನಾ ಪಾಸಿಟಿವಿಟಿ ರೇಟ್ ಜಾಸ್ತಿ ಇದ್ದರೂ, ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. ಈ ಕಾರಣದಿಂದಾಗಿ ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸಿಎಂ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ತಜ್ಞರ ಸಭೆ ನಂತರ ಮಾತನಾಡಿದ ಅವರು, ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಲಾಗಿದೆ. ಆದ್ರೆ ಶನಿವಾರ, ಭಾನುವಾರ ಸರ್ಕಾರದ ಗೈಡ್ಲೈನ್ಸ್ ಫಾಲೋ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು ಶಾಲೆಗಳ ಓಪನ್ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಬೆಂಗಳೂರಿನಲ್ಲಿ ಜನವರಿ 29ರವರೆಗೂ ಶಾಲೆಗಳು ಬಂದ್ ಇರುತ್ತವೆ. ಜನವರಿ 29ರಂದು ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ರಾಜ್ಯದ ಇತರ ಕಡೆ ಶಾಲೆಗಳು ತೆರೆದಿರುತ್ತದೆ. ಆದ್ರೆ ಶಾಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬಂದರೆ ಆ ಶಾಲೆ ಮಾತ್ರ ಮೂರರಿಂದ ಏಳು ದಿನ ಬಂದ್ ಮಾಡಲಾಗುತ್ತದೆ. ಈ ಅಧಿಕಾರ ಸ್ಥಳೀಯ ಬಿಇಒ ಹಾಗೂ ತಹಸೀಲ್ದಾರ್ಗಿರುತ್ತದೆ ಎಂದು ಸಚಿವ ನಾಗೇಶ್ ಹೇಳಿದ್ದಾರೆ.
ಸಭೆಯಲ್ಲಿ ತೀರ್ಮಾನದ ಪ್ರಮುಖ ಅಂಶಗಳು
============================
1. ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ರದ್ದು
2. ಆದರೆ ಸರ್ಕಾರದ ಗೈಡ್ಲೈನ್ಸ್ ಫಾಲೋ ಮಾಡಬೇಕು
3. ರಾತ್ರಿ 10ರಿಂದ ಬೆಳಗ್ಗೆ 5ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದೆ
4. 50:50 ರೂಲ್ಸ್ ಯಥಾಸ್ಥಿತಿ ಮುಂದುವರೆಸಲು ನಿರ್ಧಾರ ಮಾಡಲಾಗಿದೆ
5. ಇತರೆ ಎಲ್ಲಾ ನಿಯಮಗಳೂ ಮುಂದುವರೆಯುತ್ತವೆ
6. ಆಸ್ಪತ್ರೆ ಸೇರುವವರ ಸಂಖ್ಯೆಯ ಮಾನದಂಡದ ಮೇಲೆ ಹೊಸ ಗೈಡ್ಲೈನ್ಸ್ ಜಾರಿ
7. ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಿದ್ದರೆ ವೀಕೆಂಡ್ ಕರ್ಫ್ಯೂ ಮುಂದುವರೆಯುತ್ತಿತ್ತು
8. ಬೆಂಗಳೂರಿನಲ್ಲಿ ಜನವರಿ 29ರವರೆಗೂ ಶಾಲೆಗಳು ಬಂದ್
9. ಉಳಿದ ಕಡೆಗಳಲ್ಲಿ ಶಾಲೆಗಳು ನಡೆಯುತ್ತವೆ
10. ಶಾಲೆಯಲ್ಲಿ ಪಾಸಿಟಿವ್ ಪ್ರಕರಣಗಳಿದ್ದಾಗ 3 ಅಥವಾ 7 ದಿನ ಮಾತ್ರ ಬಂದ್
11. 6 ರಿಂದ 15 ವರ್ಷ ಮಕ್ಕಳಿಗೆ ಪಾಸಿಟಿವಿ ರೇಟ್ ಕಡಿಮೆ ಇದೆ
12. ಈ ಕಾರಣದಿಂದಾಗಿ ತರಗತಿಗಳು ನಡೆಸಲು ತೀರ್ಮಾನಿಸಲಾಗಿದೆ