ನನಗಿಂತ ಉತ್ತಮ ಪ್ರತಿನಿಧಿ ಬೇಕಂದ್ರೆ ಮತದಾರ ಆಯ್ಕೆ ಮಾಡಿಕೊಳ್ಳಲಿ: ಹೆಚ್ಡಿಕೆ
ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾಜಿ ಕುಮಾರಸ್ವಾಮಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ. ಮೂರೂವರೆ ವರ್ಷದಿಂದ ಈ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಇಪ್ಪತ್ತೈದು ವರ್ಷಗಳಿಂದ ಇರುವವರು ಏನು ಮಾಡಿದ್ದಾರೆಂದು ಜನ ತೀರ್ಮನ ಮಾಡಬೇಕು. ನಾನು ಪ್ರತಿ ದಿನ ಒಬ್ಬೊಬ್ಬರ ಮನೆಗೆ ಭೇಟಿ ನೀಡಿ ಟೀ ಕುಡಿದು ಶೋ ಮಾಡೋಕಿ ಇಲ್ಲಿಗೆ ಬಂದಿಲ್ಲ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಬರುತ್ತಿದ್ದೇನೆ ಎಂದು ರಾಮನಗರದ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಹೇಳಿದ್ದಾರೆ. ನೀರಾವರಿಯಿಂದ ೨೮ ಕೋಟಿ ಪಿಡಬ್ಲ್ಯೂಡಿ ಯಿಂದ ೯ ಕೋಟಿ ಒಟ್ಟು 37ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ. ಕಾಂಗ್ರೆಸ್ ನಾಯಕರು ಚಿಲ್ಲರೆ ರಾಜಕಾರಣ ಮಾಡದನ್ನು ಮೊದಲು ಬಿಡಿ.
ನಾನು ಶಾಸಕನಾದ ಮೇಲೆ ಏನೆಲ್ಲಾ ಅಭಿವೃದ್ದಿ ಕಾರ್ಯ ನಡೆದಿದೆ ಎಂಬುದನ್ನು ನೀವೇ ನೋಡಿ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಟಅಂಗ್ ನೀಡಿದ್ರು. ನನಗಿಂತ ಉತ್ತಮ ಪ್ರತಿನಿಧಿ ಬೇಕಂದ್ರೆ ಜನ ಆಯ್ಕೆ ಮಾಡಿಕೊಳ್ಳಲಿ ನನಗೇನು ಬೇಜಾರಿಲ್ಲ. ನನ್ನನ್ನೇ ಆಯ್ಕೆ ಮಾಡಬೇಕೆಂದು ಮತದಾರರಿಗೆ ನಾನು ಹೇಳಿಲ್ಲ ಎಂದಿದ್ದಾರೆ.
ಇನ್ನೂ ಕೊರೊನಾ ನಿಯಮಾವಳಿಗಳ ಬಗ್ಗೆ ಮಾತನಾಡಿ ಸರ್ಕಾರದ ಮುಂದೆ ವಾಸ್ತವಾಂಶ ಇದೆ. ಆ ಮಾಹಿತಿಗಳ ಆಧಾರದ ಮೇಲೆ ತೀರ್ಮಾನ ಮಾಡಲಿ, ತಜ್ಞರು ಅವರು ಇವರು ಮಾತು ಕೇಳೋದು ಬಿಟ್ಟು ಜನರ ಜೀವನವನ್ನು ಮೊದಲು ಗಮನಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಶಾಲೆ, ವಸತಿ ಶಾಲೆಗಳನ್ನು ಬಂದ್ ಮಾಡಬೇಕು. ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಆಗ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾಋ ನಿರ್ಧಾರ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಪಾದಯಾತ್ರೆಯಿಂದ ಕೊರೊನಾ ಸ್ವಲ್ಪ ಹೆಚ್ಚಾಗಿದೆ ಎಂದರು.