National

ಮಹಾರಾಷ್ಟ್ರದಲ್ಲಿ ಸೋಮವಾರದಿಂದ ಶಾಲೆಗಳು ಪುನಾರಂಭ

ಮುಂಬೈ: ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಶಾಲೆಗಳನ್ನು ಸೋಮವಾರದಿಂದ ತೆರೆಯಲಾಗುವುದು ಎಂದು ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್‌ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಶಾಲೆಗಳನ್ನು ಪುನಾರಂಭ ಮಾಡುವ ವಿಚಾರವಾಗಿ ಟಾಸ್ಕ್‌ ಫೋರ್ಸ್‌ ಅಧಿಕಾರಿಗಳು ಹಾಗೂ ಪೋಷಕರು ಮತ್ತು ಶಿಕ್ಷಕರ ಜೊತೆ ಚರ್ಚೆ ನಡೆಸಿದ್ದೇವೆ. ಅವರು ಶಾಲೆಗಳನ್ನು ತೆರೆಯಲು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆಗೆಯುವುದಕ್ಕೆ ಮುಖ್ಯಮಂತ್ರಿಯಿಂದ ಅನುಮತಿ ಪಡೆದಿದ್ದು, ಸೋಮವಾರದಿಂದ ಒಂದರಿಂದ ಹನ್ನೆರಡನೇ ತರಗತಿಯವರೆಗೆ ತರಗತಿಗಳು ಆರಂಭವಾಗಲಿವೆ ಎಂದು ಸಚಿವರು ಹೇಳಿದ್ದಾರೆ.

ಮಹಾರಾಷ್ಟ್ರದ ಕೆಲವೊಂದು ಸ್ಥಳಗಳಲ್ಲಿ ಕೊರೊನಾ ಇನ್ನೂ ಹೆಚ್ಚಾಗಿಯೇ ಇದೆ. ಇಂತಹ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯುವ ಬಗ್ಗೆ ಸ್ಥಳೀಯ ಆಡಳಿತಗಳೇ ನಿರ್ಧಾರ ತೆಗೆದುಕೊಳ್ಳುತ್ತವೆ. ಸೋಂಕು ಹೆಚ್ಚಿರುವ ಕಡೆ ಶಾಲೆಗಳನ್ನು ತೆರಬೇಕೇ ಬೇಡವೆ ಎಂದು ಜಿಲ್ಲಾಡಳಿತಗಳು ತೀರ್ಮಾನ ಮಾಡಲಿ ಎಂದು ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್‌ ತಿಳಿಸಿದ್ದಾರೆ.

Share Post