Cinema

ಓಟಿಟಿಗೆ ಕಾಲಿಟ್ಟ ಬಡವ ರಾಸ್ಕಲ್‌

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳು ಓಟಿಟಿಯಲ್ಲಿಯೇ ತೆರೆ ಕಾಣ್ತಿವೆ. ಇನ್ನು ಕೆಲವು ಸಿನಿಮಾಗಳು ಥಿಯೇಟರ್‌ಗೆ ಹೋಗಿ ನಂತರ ಓಟಿಟಿಗೆ ಬರುತ್ತೆ. ಕಳೆದ ವರ್ಷ ಮಾಡಿದ ಎಲ್ಲಾ ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಕೊಟ್ಟ ಡಾಲಿ ಧನಂಜಯ್‌ ಅವರ ಮತ್ತೊಂದು ಸಿನಿಮಾ ಬಡವ ರಾಸ್ಕಲ್‌ ಕೂಡ ಓಟಿಟಿಗೆ ಲಗ್ಗೆ ಇಟ್ಟಿದೆ.

ಡಿ24ರಂದು ತೆರೆ ಕಂಡಿದ್ದ, ಶಂಕರ್‌ ಗುರು ನಿರ್ದೇಶನದ ಬಡವ ರಾಸ್ಕಲ್‌ ಸಿನಿಮಾವನ್ನು ಇನ್ನು ಮುಂದೆ ವೂಟ್‌ ಸೆಲೆಕ್ಟ್‌ನಲ್ಲಿ ನೋಡಬಹುದು. ಇದೇ ಜನವರಿ 26ರಿಂದ ಬಡವ ರಾಸ್ಕಲ್‌ ಸಿನಿಮಾ ವೂಟ್‌ ಸೆಲೆಕ್ಟ್‌ನಲ್ಲಿ ಲಭ್ಯವಿರಲಿದೆ.

2021 ಡಾಲಿ ಧನಂಜಯ್‌ ಅವರ ಪಾಲಿಗೆ ಅದ್ಭುತ ವರ್ಷ ಎಂದರೆ ತಪ್ಪಾಗುವುದಿಲ್ಲ. ಸಲಗ, ರತ್ನನ್‌ ಪ್ರಪಂಚ, ಬಡವ ರಾಸ್ಕಲ್‌ ಮೂರೂ ಸಿನಿಮಾ ಸೂಪರ್‌ ಹಿಟ್‌ ಆದವು. ಬಡವ ರಾಸ್ಕಲ್‌ ಮೂಲಕ ಧನಂಜಯ್‌ ನಿರ್ಮಾಪಕರು ಕೂಡ ಆಗಿದ್ದಾರೆ.

ಮಿಡಲ್‌ ಕ್ಲಾಸ್‌ ಸ್ಟೋರಿ ಹೊತ್ತು ಬಂದಿದ್ದ ಬಡವ ರಾಸ್ಕಲ್‌ ಸಿನಿಮಾವನ್ನು ಜನರು ಸಾಕಷ್ಟು ಪ್ರೀತಿ ಕೊಟ್ಟು ಸಿನಿಮಾ ಗೆಲ್ಲಿಸಿದ್ದಾರೆ.

ವೂಟ್‌ ಸೆಲೆಕ್ಟ್‌ನಲ್ಲಿ  ಸಿನಿಮಾವನ್ನು ನೋಡಬಹುದು ಎಂಬುದನ್ನು ಧನಂಜಯ್‌ ಅವರೇ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Share Post