ನಂಜನಗೂಡು ಬಳಿ ರಸ್ತೆಯಲ್ಲೇ ಒಕ್ಕಣೆ; ಗರ್ಭಿಣಿ ಪರದಾಟ
ಮೈಸೂರು: ಒಕ್ಕಣೆ ಮಾಡಲು ಹುರುಳಿ ಫಸಲನ್ನು ರಸ್ತೆಗೆ ಹಾಕಿದ್ದು, ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ವಾಹನ ಅದ್ರಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡಿದ ಘಟನೆ ನಂಜನಗೂಡಿನ ಬಳಿ ನಡೆದಿದೆ.
ಕೂಡ್ಲಾಪುರದ ಬಳಿ ರಸ್ತೆಯಲ್ಲಿ ಹುರುಳಿ ಫಸಲನ್ನು ಹಾಕಿ ಒಕ್ಕಣೆ ಮಾಡಲಾಗುತ್ತಿತ್ತು. ಈ ವೇಳೆ ಇದರ ಮೇಲೆ ವಾಹನಗಳು ಓಡಾಡುತ್ತಿದ್ದವು. ಅಲ್ಲಿ ಅಂಬುಲೆನ್ಸ್ ಕೂಡಾ ಬಂದಿದ್ದು, ಹುಲ್ಲು ಅಂಬುಲೆನ್ಸ್ ಚಕ್ರಕ್ಕೆ ಸುತ್ತಿಕೊಂಡಿದೆ. ಇದ್ರಿಂದಾಗಿ ಅದು ಅಲ್ಲಿಯೇ ನಿಂತಿದೆ. ಅದನ್ನು ಬಿಡಿಸಿಕೊಂಡು ಮುಂದೆ ಸಾಗಲು ಅರ್ಧ ಗಂಟೆ ತೆಗೆದುಕೊಂಡಿದೆ. ಹೀಗಾಗಿ ಹೆರಿಗೆ ನೋವಿನಿಂದ ಮಹಳೆ ಪರದಾಡಿದ್ದಾರೆ.
ನಂಜನಗೂಡು ಸುತ್ತಮುತ್ತ ರೈತರು ಒಕ್ಕಣೆ ಮಾಡಲು ರಸ್ತೆಯನ್ನೇ ಬಳಸುತ್ತಿದ್ದಾರೆ. ಇದ್ರಿಂದಾಗಿ ಈ ಭಾಗದಲ್ಲಿ ಇಂತಃ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ. ಸರ್ಕಾರ ಒಕ್ಕಣೆ ಮಾಡಲು ರೈತರಿಗೆ ಯಾವುದೇ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಹೀಗಾಗಿ ರೈತರು ರಸ್ತೆಯನ್ನು ಅವಲಂಭಿಸುವಂತಾಗಿದೆ ಎಂಬುದು ರೈತರ ಆರೋಪ.