Sports

ಆಟಗಾರರಿಗೆ ಕೊವಿಡ್‌ ಬಂದರೂ ಕ್ರಿಕೆಟ್‌ ಪಂದ್ಯ ನಿಲ್ಲೋದಿಲ್ಲ..!

ಜೋಹಾನ್ಸ್‌ಬರ್ಗ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರು ಏಕದಿನ ಹಾಗೂ ಟೆಸ್ಟ್‌ ಟೂರ್ನಿ ವೇಳೆ ಆಟಗಾರರು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಕೊವಿಡ್‌ ದೃಢಪಟ್ಟರೂ ನಿಗದಿಯಂತೆ ಪಂದ್ಯ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಬಿಸಿಸಿಐ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಒಪ್ಪಿಗೆ ಸೂಚಿಸಿವೆ.

ಅಂದಹಾಗೆ, ಸೆಂಚುರಿಯನ್‌ನಲ್ಲಿ ಡಿಸೆಂಬರ್ 26ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಭಾರತ–ದಕ್ಷಿಣ ಆಫ್ರಿಕಾ ಸರಣಿಗೆ ಚಾಲನೆ ಸಿಗಲಿದೆ.‌ ಜನವರಿ ೩-೭ರವರೆಗೆ ಎಡರನೇ ಟೆಸ್ಟ್ ಜೋಹಾನ್ಸ್‌ಬರ್ಗ್ ನಲ್ಲಿ ಮತ್ತು ಕೇಪ್ ಟೌನ್‌ ನಲ್ಲಿ ಜನವರಿ ೧೧-೧೫ರವರೆಗೆ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಟೆಸ್ಟ್ ಸರಣಿ ಬಳಿಕ ಜನವರಿ 19, 21 ಮತ್ತು 23ನೇ ಏಕದಿನ ಪಂದ್ಯಗಳು ನಡೆಯಲಿವೆ. ಆಟಗಾರರಿಗೆ ಕೊವಿಡ್‌ ದೃಢಪಟ್ಟರೆ, ವಾರ ಆರೋಗ್ಯ ಸ್ಥಿರವಾಗಿದ್ದರೆ, ಅವರನ್ನು ಹೋಟೆಲ್‌ ರೂಂನಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಜೊತೆಗೆ ಇತರೆ ಆಟಗಾರರ ಮೇಲೆ ತೀವ್ರ ನಿಗಾ ಹಾಗೂ ಕಾಲಕಾಲಕ್ಕೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

Share Post