Politics

ಡಿಕೆ ಬ್ರದರ್ಸ್‌ ನಂಬಿದ್ದ ಕ್ಷೇತ್ರಗಳೇ ಕೈಕೊಟ್ಟವು!; ಕನಕಪುರದಲ್ಲೂ ʻಬಂಡೆʼ ನಿರೀಕ್ಷೆ ಛಿದ್ರ ಛಿದ್ರ!

 ಬೆಂಗಳೂರು; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಈ ಬಾರಿ ಅತ್ಯಂತ ಹೀನಾಯವಾಗಿ ಸೋಲನುಭವಿಸಿದ್ದಾರೆ.. ಈ ಬಾರಿ ಅತ್ಯಂತ ಅಚ್ಚುಕಟ್ಟಾಗಿ ಚುನಾವಣೆ ಮಾಡಿದರೂ ಕೂಡಾ, ಇಲ್ಲಿ ಡಾ.ಸಿ.ಎನ್‌.ಮಂಜುನಾಥ್‌ ಅವರೇ ಹೆಚ್ಚಿನ ಮತದಾರರ ಹೃದಯ ಗೆದ್ದಿದ್ದಾರೆ.. ಇನ್ನೂ ವಿಶೇಷ ಅಂದ್ರೆ ಯಾರೂ ಕಾಂಗ್ರೆಸ್‌ ಪ್ರಾಬಲ್ಯದ ಕ್ಷೇತ್ರಗಳಲ್ಲೂ ಮಂಜುನಾಥ್‌ ಹೆಚ್ಚಿನ ಮತಗಳನ್ನು ಪಡೆದು ಡಿಕೆ ಬ್ರದರ್ಸ್‌ಗೆ ಭಾರಿ ಶಾಕ್‌ ನೀಡಿದ್ದಾರೆ.. ಡಿ.ಕೆ. ಸಹೋದರರು, ತಮ್ಮ ಸ್ವಕ್ಷೇತ್ರ ಕನಕಪುರ, ಸಂಬಂಧಿ ರಂಗನಾಥ್‌ ಪ್ರತಿನಿಧಿಸುವ ಕುಣಿಗಲ್‌, ಬಾಲಕೃಷ್ಣರ ಮಾಗಡಿ ಹಾಗೂ ರಾಮನಗರ ಕ್ಷೇತ್ರಗಳಲ್ಲಿ ಹೆಚ್ಚು ಮತಗಳನ್ನು ನಿರೀಕ್ಷೆ ಮಾಡಿದ್ದರು.. ಆದ್ರೆ ಕಾಂಗ್ರೆಸ್‌ ಗೆ ರಾಮಗರದಲ್ಲಿ ಬರೀ ಇನ್ನೂರು ಚಿಲ್ಲರೆ ಮತಗಳ ಲೀಡ್‌ ಬಂದರೆ, ಕನಕಪುರದಲ್ಲಿ ಲೀಡ್‌ ಪ್ರಮಾಣ ಪಾತಾಳಕ್ಕೆ ಕುಸಿದಿದೆ.. ಇನ್ನು ಕುಣಿಗಲ್‌ ಹಾಗೂ ಮಾಗಡಿಯಲ್ಲಿ ಮಂಜುನಾಥ್‌ ಅವರೇ ಲೀಡ್‌ ಪಡೆದುಕೊಂಡಿದ್ದಾರೆ..

ಕಳೆದ ವಿಧಾನಸಭಾ ಚುನಾವಣೆ ಡಿ.ಕೆ.ಶಿವಕುಮಾರ್‌ ಅವರು ಕನಕಪುರದಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌ ಸ್ಪರ್ಧೆ ಮಾಡಿದ್ದರು.. ಆದರೂ ಕೂಡಾ ಅಶೋಕ್‌ ಅವರು ಠೇವಣಿ ಕಳೆದುಕೊಂಡಿದ್ದರು.. ಡಿ.ಕೆ.ಶಿವಕುಮಾರ್‌ ಅವರು 1 ಲಕ್ಷಕ್ಕೂ ಅಧಿಕ ಮತಗಳ ಲೀಡ್‌ ಪಡೆದಿದ್ದರು.. ಈ ಬಾರಿಯ ಲೋಕಸಭಾ ಚುನಾವಣೆಲ್ಲಿ ಕನಕಪುರ ಕ್ಷೇತ್ರದಲ್ಲಿ ಕನಿಷ್ಠ 80 ಸಾವಿರವಾದರೂ ಲೀಡ್‌ ಬರುತ್ತೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದರು.. ಆದ್ರೆ ಸ್ವಂತ ಊರು ಕನಕಪುರದಲ್ಲೇ ಮತದಾನ ಮಂಜುನಾಥ್‌ ಪರವಾಗಿ ಹೆಚ್ಚಿನ ಒಲವು ತೋರಿಸಿದ್ದಾರೆ.. ಡಿ.ಕೆ.ಶಿವಕುಮಾರ್‌ ಪತ್ನಿ, ಮಗಳು ಕೂಡಾ ಪ್ರಚಾರಕ್ಕಿಳಿದರೂ ಕೂಡಾ ಇಲ್ಲಿ ಡಿ.ಕೆ.ಸುರೇಶ್‌ಗೆ ಬಂದ ಲೀಡ್‌ ಕೇವಲ 25,677 ಮತಗಳು ಮಾತ್ರ.. ಇದು ಬಿಟ್ಟರೆ ರಾಮನಗರದಲ್ಲಿ ಇನ್ನೂರು ಚಿಲ್ಲರೆ ಮತಗಳು ಲೀಡ್‌ ಬಂದಿದ್ದು ಬಿಟ್ಟರೆ ಉಳಿದೆಲ್ಲಾ ಕಡೆ ಮಂಜುನಾಥ್‌ ಅವರೇ ಲೀಡ್‌ ಪಡೆದುಕೊಂಡಿದ್ದಾರೆ..

ಡಿ.ಕೆ.ಶಿವಕುಮಾರ್‌ ಅವರ ಸಂಬಂಧಿ ಡಾ.ರಂಗನಾಥ್‌ ಎರಡು ಬಾರಿ ಶಾಸಕರಾಗಿರುವ ಕುಣಿಗಲ್‌ ಕ್ಷೇತ್ರದಲ್ಲೂ ಹೆಚ್ಚಿನ ಲೀಡ್‌ ನಿರೀಕ್ಷೆ ಮಾಡಲಾಗಿತ್ತು.. ಆದ್ರೆ ಲೀಡ್‌ ಬರುವುದಿರಲಿ, ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಮುಗ್ಗರಿಸಿದೆ.. ಇಲ್ಲಿ ಡಾ.ಮಂಜುನಾಥ್‌ ಅವರು 23,838 ಮತಗಳ ಲೀಡ್‌ ಪಡೆದುಕೊಂಡಿದ್ದಾರೆ.. ಇನ್ನು ಶಾಸಕ ಬಾಲಕೃಷ್ಣ ಪ್ರತಿನಿಧಿಸುವ ಮಾಗಡಿಯಲ್ಲೂ ಡಿಕೆ ಸಹೋದರರ ನಿರೀಕ್ಷೆ ಹುಸಿಯಾಗಿದೆ.. ಮಾಗಡಿಯಲ್ಲೂ ಕೂಡಾ ಡಾ.ಸಿ.ಎನ್‌.ಮಂಜುನಾಥ್‌ ಅವರು 29,973 ಮತಗಳ ಲೀಡ್‌ ಬಂದಿದೆ.. ಇನ್ನು ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿ ನಗರದಲ್ಲಿ ನಿರೀಕ್ಷೆ ಮೀರಿ ಮಂಜುನಾಥ್‌ ಅವರಿಗೆ ಲೀಡ್‌ ಕೊಟ್ಟಿದ್ದಾರೆ..

ಯಾವ ಕ್ಷೇತ್ರದಲ್ಲಿ ಎಷ್ಟು ಲೀಡ್‌ ಅಂತ ನೋಡೋದಾದರೆ..

ಕನಕಪುರ
ಡಾ.ಮಂಜುನಾಥ್‌ 83303
ಡಿ.ಕೆ.ಸುರೇಶ್‌ 108980
ಲೀಡ್‌; 25677 (ಕಾಂಗ್ರೆಸ್‌)

ಕುಣಿಗಲ್‌
ಡಾ.ಮಂಜುನಾಥ್‌ 97248
ಡಿ.ಕೆ.ಸುರೇಶ್‌ 73410
ಲೀಡ್‌; 23838 (ಬಿಜೆಪಿ)

ಮಾಗಡಿ
ಡಾ.ಮಂಜುನಾಥ್‌  113911
ಡಿ.ಕೆ.ಸುರೇಶ್‌ 83938
ಲೀಡ್‌; 29973 (ಬಿಜೆಪಿ)

ಚನ್ನಪಟ್ಟಣ
ಡಾ.ಮಂಜುನಾಥ್‌ 106971
ಡಿ.ಕೆ.ಸುರೇಶ್‌ 85357
ಲೀಡ್‌; 21614 (ಬಿಜೆಪಿ)

ಕನಕಪುರ
ಡಾ.ಮಂಜುನಾಥ್‌ 83303
ಡಿ.ಕೆ.ಸುರೇಶ್‌ 108980
ಲೀಡ್‌; 25677 (ಕಾಂಗ್ರೆಸ್‌)

ಆನೇಕಲ್‌
ಡಾ.ಮಂಜುನಾಥ್‌ 137693
ಡಿ.ಕೆ.ಸುರೇಶ್‌ 115328
ಲೀಡ್‌; 22365 (ಬಿಜೆಪಿ)

ಬೆಂಗಳೂರು ದಕ್ಷಿಣ
ಡಾ.ಮಂಜುನಾಥ್‌ 255756
ಡಿ.ಕೆ.ಸುರೇಶ್‌ 158627
ಲೀಡ್‌; 977129 (ಬಿಜೆಪಿ)

ರಾಜರಾಜೇಶ್ವರಿ ನಗರ
ಡಾ.ಮಂಜುನಾಥ್‌ 188726
ಡಿ.ಕೆ.ಸುರೇಶ್‌ 89729
ಲೀಡ್‌; 98997 (ಬಿಜೆಪಿ)

 

Share Post