National

ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ, ಪ್ರಧಾನಿ ಮೋದಿ ಶುಭಾಶಯ

ದೆಹಲಿ: ಇಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಹೀಗಾಗಿ ಹಲವು ಗಣ್ಯರು ವಾಜಪೇಯಿ ಅವರಿಗೆ ಶುಭಾಶಯ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದು, ಇಂದು ಗೌರವ ಸಮರ್ಪಿಸಿದ್ದಾರೆ. ಆದರಣೀಯ ಅಟಲ್‌ ಜೀ, ನಿಮಗೆ ಕೋಟಿ ಕೋಟಿ ನಮನ ಎಂದು ಹೇಳಿದ್ದಾರೆ.
ಅಟಲ್‌ ಜೀ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ರಾಷ್ಟ್ರಕ್ಕೆ ಅವರು ನೀಡಿದ್ದ ಸೇವೆಯ ಶ್ರೀಮಂತಿಕೆಯೇ ನಮಗೆ ಸ್ಫೂರ್ತಿ. ಭಾರತವನ್ನು ಸುಭದ್ರವಾಗಿಸಲು ಮತ್ತು ಅಭಿವೃದ್ಧಿಪಡಿಸಲು ತಮ್ಮ ಜೀವನವನ್ನೇ ಮುಡಿಪಾಗಿ ಇರಿಸಿದರು. ವಾಜಪೇಯಿ ಅವರ ಅಭಿವೃದ್ಧಿ ಪರ ಕಾರ್ಯಗಳು ಲಕ್ಷಾಂತರ ಭಾರತೀಯರಿಗೆ ಧನಾತ್ಮಕ ಪರಿಣಾಮ ಬೀರಿದೆ ಎಂದರು.

Share Post