ಐದು ತಿಂಗಳಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಪತನ; ಬಿಜೆಪಿ ಭವಿಷ್ಯ
ಕೋಲ್ಕತ್ತಾ; ಮಮತಾ ಬ್ಯಾನರ್ಜಿ ಸತತ ನಾಲ್ಕನೇ ಬಾರಿ ಸಿಎಂ ಆಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಾರ್ಟಿ ಸುಭದ್ರ ಸರ್ಕಾರ ರಚನೆ ಮಾಡಿದೆ. ಆದ್ರೆ ಈ ಸರ್ಕಾರ ಕೂಡಾ ಬಿದ್ದುಹೋಗುತ್ತೆ ಎಂದು ಬಿಜೆಪಿ ಹೇಳುತ್ತಿದೆ. ಇನ್ನು ಐದು ತಿಂಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದೆ. ಈ ಮೂಲಕ ಆಪರೇಷನ್ ಕಮಲದ ಸುಳಿವು ನೀಡಿದೆ.
ಬಿಜೆಪಿ ಸಂಸದ ಶಾಂತನು ಠಾಕೂರ್ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಮಮತಾ ಸರ್ಕಾರ ಹೆಚ್ಚು ಅಂದರೆ ಐದು ತಿಂಗಳು ಉಳಿಯುತ್ತದೆ. ಅದರ ಮೇಲೆ ಉಳಿಯೋದಿಲ್ಲ ಅಂತ ಅವರು ಹೇಳಿಕೊಂಡಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಅಕ್ರಮಗಳನ್ನು ಹೆಚ್ಚು ನಡೆಸಿತು. ಇಲ್ಲದಿದ್ದರೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದೂ ಅವರು ಹೇಳಿದ್ದಾರೆ.