National

ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ; ನಾಲ್ಕು ದಿನದಲ್ಲಿ 2 ರೂಪಾಯಿ 40 ಪೈಸೆ ಹೆಚ್ಚಳ

ನವದೆಹಲಿ: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಕಳೆದ ನಾಲ್ಕು ದಿನದಿಂದೀಚೆಗೆ ಮೂರು ಬಾರಿ ಏರಿಕೆ ಮಾಡಲಾಗಿದೆ. ಇವತ್ತು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಲೀಟರ್‌ಗೆ 80 ಪೈಸೆ ಏರಿಕೆ ಮಾಡಲಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ ಲೀಟರ್‌ಗೆ 2 ರೂಪಾಯಿ 40 ಪೈಸೆ ಹೆಚ್ಚಾಗಿದೆ. ಮಂಗಳವಾರ ಮೊದಲ ಬಾರಿಗೆ ಬೆಲೆ ಏರಿಕೆ ಮಾಡಲಾಗಿತ್ತು. ಅನಂತರ ಬುಧವಾರವೂ ಬೆಲೆ ಏರಿಕೆಯಾಗಿತ್ತು. ಆದ್ರೆ ಗುರುವಾರ ಯಾವುದೇ ಬದಲಾವಣೆಯಾಗಿರಲಿಲ್ಲ. ಇಂದು ಮತ್ತೆ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಇಂದಿನಿಂದ ಬೆಲೆ ಏರಿಕೆಯಿಂದಾಗಿ ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ದರ 103.11 ರೂಪಾಯಿ ಆಗಿದ್ದರೆ, ಡೀಸೆಲ್‌ ಬೆಲೆ ಲೀಟರ್‌ಗೆ 87.37 ರೂಪಾಯಿ ಆಗಿದೆ. ಇವತ್ತು ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 85 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್‌ 79 ಪೈಸೆ ಹೆಚ್ಚಾಗಿದೆ. ಇನ್ನು ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 97.81 ರೂಪಾಯಿ ಇದ್ದರೆ, ಪ್ರತಿ ಲೀಟರ್ ಡೀಸೆಲ್‌ ದರ 89.07 ರೂಪಾಯಿ ಇದೆ.

Share Post