NationalPolitics

ಹಳೆಯ ಸಂಸತ್‌ ಭವನ ಬಿಟ್ಟು ಹೋಗುವುದು ಕಷ್ಟದ ಕೆಲಸ; ಪ್ರಧಾನಿ ಮೋದಿ

ನವದೆಹಲಿ; ಹಳೆದ ಸಂಸತ್‌ ಭವನ ನಮಗೆ ಯಾವಾಗಲೂ ಪ್ರೇರಣೆ. ಅದನ್ನು ಬಿಟ್ಟು ಹೋಗುವುದು ಕಷ್ಟದ ಕೆಲಸ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್‌ ವಿಶೇಷ ಅಧಿವೇಶನದಲ್ಲಿ ಸದನವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಹಳೆಯ ಸಂಸತ್‌ ಭವನವನ್ನು ಕಟ್ಟಿಸಿದ್ದು ವಿದೇಶಿಗರಾದರೂ, ಅದನ್ನು ಕಟ್ಟಿದ್ದು ಭಾರತೀಯ ಕಾರ್ಮಿಕರು. ಹೀಗಾಗಿ ನಮ್ಮ ಜನರು ಇದಕ್ಕಾಗಿ ಬೆವರು ಹರಿಸಿದ್ದಾರೆ. ಈ ದೇಶದ ಹಣದಿಂದಲೇ ಈ ಭವನ ಕಟ್ಟಲಾಗಿದೆ. ಹೀಗಾಗಿ ಹಳೆಯ ಸಂಸತ್‌ ಭವನ ಯಾವಾಗಲೂ ನಮಗೆ ಪ್ರೇರಣೆ ಎಂದು ಹೇಳಿದರು.

ಹೊಸ ಸಂಸತ್‌ ಭವನವನ್ನು ನಾವು ಕಟ್ಟಿದ್ದೇವೆ. ಈಗ ಹೊಸ ಮನೆಗೆ ಹೋಗುತ್ತಿದ್ದೇವೆ. ಆದ್ರೆ, ಯಾವಾಗಲೂ ಹಳೇ ಮನೆ ಬಿಟ್ಟು ಹೋಗುವುದು ದುಃಖ ತರಿಸುತ್ತದೆ ಎಂದು ಮೋದಿ ಹೇಳಿದರು. ಹಳೆಯ ಮನೆಯನ್ನು ಬಿಟ್ಟುಹೋಗುವುದು ಒಂದು ಕುಟುಂಬಕ್ಕೆ ಎಷ್ಟು ಕಷ್ಟವೋ ಅಷ್ಟೇ ಕಷ್ಟ ನಮಗೂ ಆಗುತ್ತಿದೆ. ಆನೇಕ ಸಿಹಿ, ಹಕಿ ಘಟನೆಗಳು ಅದರೊಂದಿಗೆ ತಳಕು ಹಾಕಿಕೊಂಡಿವೆ ಎಂದು ಪ್ರಧಾನಿ ಮೋದಿ ಹೇಳಿದರು. G20 ಯಶಸ್ಸು ನಾವೆಲ್ಲಾ ಸಂಭ್ರಮ ಪಡುವಂತಹ ವಿಚಾರ. ಇದು ಯಾವುದೇ ಪಕ್ಷದ, ನಾಯಕನ ಯಶಸ್ಸು ಅಲ್ಲ. 140 ಕೋಟಿ ಭಾರತೀಯರ ಯಶಸ್ಸು. ಆಫ್ರೀಕನ್ ಯೂನಿಯನ್ ಕೂಡ G20ಗೆ ಸೇರಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Share Post