National

NSE ಮಾಜಿ ಸಿಇಒಗೆ 14 ದಿನ ನ್ಯಾಯಾಂಗ ಬಂಧನ; ಜೈಲೂಟವನ್ನೇ ಮಾಡಲು ಸೂಚನೆ

ನವದೆಹಲಿ: ಎನ್‌ಎಸ್‌ಇ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಚಿತ್ರಾ ರಾಮಕೃಷ್ಣಗೆ ದೆಹಲಿಯ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಷೇರುಗಳನ್ನು ತ್ವರಿತವಾಗಿ ಖರೀದಿಸಲು ಹಾಗೂ ಮಾರಾಟ ಮಾಡಲು ವರ್ತಕರಿಗೆ ಅವಕಾಶ ಕಲ್ಪಿಸುವ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಇವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ಚಿತ್ರಾ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಅವರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಕೇಳುವ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದೇ ನುಚಿಕೊಳ್ಳುತ್ತಿದ್ದಾರೆ ಎಂದು ಸಿಬಿಐ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದರು. ಇದೇ ವೇಳೆ ಚಿತ್ರಾ ಅವರಿಗೆ ಮನೆಯ ಊಟ ನೀಡಲು ಅನುಮತಿ ನೀಡುವಂತೆ ಚಿತ್ರಾ ಪರ ವಕೀಲರು ಮನವಿ ಮಾಡಿದರು. ಜೈಲಿನಲ್ಲಿಯೂ ಊಟ ಚೆನ್ನಾಗಿಯೇ ಇರುತ್ತದೆ. ಹಲವು ಬಾರಿ ನಾನೂ ಸಹ ಅಲ್ಲಿನ ಊಟ ಮಾಡಿರುವೆ ಎಂದು ನ್ಯಾಯಾಧೀಶರು ಹೇಳಿದ್ದಾಗಿ ವರದಿಯಾಗಿದೆ.

Share Post