CrimeNational

ಸುಕೇಶ್‌ ಚಂದ್ರಶೇಖರ್‌ ಪ್ರಕರಣ; ನಟಿ ನೋರಾ ಫತೇಹಿ ವಿಚಾರಣೆ

ನವದೆಹಲಿ; ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣದಲ್ಲಿ ನಟಿಯ ಪಾತ್ರದ ಬಗ್ಗೆ ಮಾಹಿತಿ ಕಲೆ ಹಾಕಿರುವ ದೆಹಲಿ ಪೊಲೀಸರು, ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರು. ಸುಕೇಶ್‌ಗೆ ನೋರಾ ಅವರನ್ನು ಪರಿಚಯಿಸಿದ ಪಿಂಕಿ ಇರಾನಿ ಜೊತೆಯೇ ವಿಚಾರಣೆ ನಡೆಸಲಾಗುತ್ತಿದೆ. ನಿನ್ನೆ ಪಿಂಕಿ ಇರಾನಿ ಹಾಗೂ ನಟಿ ಜಾಕ್ವೆಲಿನ್ ವಿಚಾರಣೆ ನಡೆದಿತ್ತು.

ಸೆಪ್ಟೆಂಬರ್ 2ರಂದು ನೋರಾ ಫತೇಹಿ ಅವರನ್ನು ಮೊದಲ ಬಾರಿಗೆ 6–7ಗಂಟೆ ವಿಚಾರಣೆ ನಡೆಸಲಾಗಿತ್ತು. ಈಗ ಕೆಲವು ಉತ್ತರ ಸಿಗದ ಪ್ರಶ್ನೆಗಳಿಗಾಗಿ ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ, ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.

Share Post