ಅಯೋಧ್ಯೆಗಾಗಿ 108 ಅಡಿ ಬೃಹತ್ ಅಗರಬತ್ತಿ ತಯಾರಿ
ವಡೋದರ; ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ. ಇದರ ಭಾಗವಾಗಿಯೇ ಭಕ್ತರೊಬ್ಬರು ಶ್ರೀರಾಮನಿಗೆ ವಿಶೇಷವಾಗಿ ಭಕ್ತಿ ಸಮರ್ಪಣೆಗೆ ಮುಂದಾಗಿದ್ದಾರೆ. ಗುಜರಾತ್ ವಡೋದರಾದಲ್ಲಿ ಬೃಹದಾಕಾರದ ಅಗರಬತ್ತಿ ತಯಾರಿಸಲಾಗುತ್ತಿದೆ.
ಸುಮಾರು 108 ಅಡಿ ಉದ್ದದ ಅಗರಬತ್ತಿ ತಯಾರಿಸಲಾಗಿದೆ. ಈ ಅಗರಬತ್ತಿ ಬರೋಬ್ಬರಿ 3428 ಕೆಜಿ ತೂಕವಿದೆ ಎಂದು ತಿಳಿದುಬಂದಿದೆ. ಇದನ್ನು ನಿಲ್ಲಿಸಲು ಬೃಹತ್ ಟ್ರೈಪಾಡ್ ಸ್ಟ್ಯಾಂಡ್ ಕೂಡಾ ರೆಡಿ ಮಾಡಲಾಗಿದೆ. ರಾಮಮಂದಿರ ಉದ್ಘಾಟನೆಗೂ ಮೊದಲೇ ಈ ಅಗರಬತ್ತಿಯನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.