Lifestyle

ಮದುವೆಯ ನಂತರ ಹುಡುಗಿಯರು ದಪ್ಪ ಆಗೋದ್ಯಾಕೆ ಗೊತ್ತಾ..?

ಹೆಣ್ಣು ಜೀವನದ ವಿವಿಧ ಹಂತಗಳಲ್ಲಿ ಬದಲಾಗುತ್ತಾ ಹೋಗುತ್ತಾಳೆ.. ಅದರಲ್ಲೂ ಹೆಣ್ಣು ಮದುವೆಗೆ ಮುಂಚೆ ಒಂದು ರೀತಿ ಇದ್ದರೆ ಮದುವೆಯ ನಂತರ ಆಕೆ ಬೇರೆಯದೇ ರೀತಿಯಲ್ಲಿ ಬದಲಾಗಿರುತ್ತಾಳೆ.. ವಿಶೇಷವಾಗಿ ಹೇಳೋದಾದರೆ, ಮದುವೆಗೆ ಮುಂಚೆ ಬಹುತೇಕ ಎಲ್ಲಾ ಹೆಣ್ಣು ಮಕ್ಕಳೂ ಸ್ಲಿಮ್‌ ಅಂಡ್‌ ಫಿಟ್‌ ಆಗಿರುತ್ತಾರೆ.. ಆದ್ರೆ ಮದುವೆಯಾದ ಕೆಲ ತಿಂಗಳ ನಂತರ ದಪ್ಪಗಾಗುತ್ತಾ ಬರುತ್ತಾರೆ.. ಅದ್ರಲ್ಲೂ ಒಂದು ಮಗು ಆದ ಮೇಲೆ ಅವರು ಮತ್ತಷ್ಟು ದುಂಡಗಾಗಿರುತ್ತಾರೆ.. ಇದಕ್ಕೆ ಹಲವಾರು ಕಾರಣಗಳಿವೆ.. ಅವುಗಳ ಬಗ್ಗೆ ತಿಳಿಯೋಣ ಬನ್ನಿ..

ಮದುವೆ ಸಮಯದ ಕಾರ್ಯಗಳು;

ಮದುವೆ ಅಂತ ಬಂದಾಗ ಮನೆಯಲ್ಲಿ ಹಲವು ಕಾರ್ಯಗಳು ನಡೆಯುತ್ತವೆ.. ನಿಶ್ಚಿತಾರ್ಥ, ಹಲ್ದಿ, ಮೆಹಂದಿ, ಮದುವೆ ಹಾಗು ಹನಿಮೂನ್‌ ಹೀಗೆ ಹಲವು ಕಾರ್ಯಗಳು ನಡೆಯುತ್ತವೆ.. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭರ್ಜರಿ ಭೋಝನ ವ್ಯವಸ್ಥೆಗಳಿರುತ್ತವೆ.. ಇಂತಹ ಕಾರ್ಯಕ್ರಮಗಳಲ್ಲಿ ಸಿಹಿ ಪದಾರ್ಥಗಳಿಗೆ ಪ್ರಧಾನ ಸ್ಥಾನ ಇರುತ್ತದೆ.. ಹೀಗಾಗಿ, ಹೆಚ್ಚು ಕ್ಯಾಲೊರಿಗಳಿರುವ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ಹೆಣ್ಣು ಸ್ವಲ್ಪ ದಪ್ಪ ಆಗುತ್ತಾಳೆ.. ಅದ್ರಲ್ಲೂ ಮದುವೆಯ ಹೊಸದರಲ್ಲಿ ಅಲ್ಲಿ ಇಲ್ಲಿ ಸುತ್ತಾಟಗಳು ಹೆಚ್ಚಾಗುತ್ತವೆ.. ಈ ಸಮಯದಲ್ಲಿ ಊಟದ ಸಮಯ ಹಾಗೂ ಊಟಗಳು ಬದಲಾಗುತ್ತವೆ.. ಜಂಕ್‌ ಫುಡ್‌ಗಳ ಸೇವನೆ ಹೆಚ್ಚಾಗುತ್ತದೆ.. ಹೆಚ್ಚಿನ ಕ್ಯಾಲೊರಿಯ ಪದಾರ್ಥಗಳು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ.. ಇನ್ನು ಮದುವೆಯ ಹೊಸದರಲ್ಲಿ ಸಂಬಂಧಿಕರ ಮನೆಗಳಿಗೂ ಭೇಟಿ ನೀಡುವುದರಿಂದಲೂ ಅಲ್ಲಿಯೂ ಭರ್ಜರಿ ಊಟದ ವ್ಯವಸ್ಥೆಗಳಿಂದಾಗಿ ಬೇಡ ಎಸನಿಸಿದರೂ ಬಲವಂತಕ್ಕಾದರೂ ತಿನ್ನಬೇಕಾಗುತ್ತದೆ..

ಆಹಾರ ವಿಧಾನಗಳಲ್ಲಿ ಬದಲಾವಣೆ;

ಮದುವೆಯಾದ ಮೇಲೆ ಹೆಣ್ಣು ಬೇರೊಂದು ಮನೆಗೆ ಹೋಗಬೇಕಾಗುತ್ತದೆ.. ಅಂದರೆ ಅಲ್ಲಿನ ಆಹಾರ ಪದ್ಧತಿಗಳು ಬದಲಾಗಿರುತ್ತವೆ.. ಮದುವೆಗೆ ಮೊದಲು ಡಯೆಟ್‌ ಮಾಡುತ್ತಿದ್ದ ಹೆಣ್ಣು ಅತ್ತೆ ಮನೆಗೆ ಬಂದ ಮೇಲೆ ಆಕೆಯ ಆಹಾರ ಶೈಲಿ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು.. ಅಡುಗೆಯ ವಿಧಾನಗಳು ಬದಲಾಗುತ್ತವೆ.. ಇದು ಜೀರ್ಣಾಂಗದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ.. ಹೊಸ ಆಹಾರ ಪದ್ಧತಿಗೆ ಒಗ್ಗಿಕೊಳ್ಳುವುದು ಕಷ್ಟವಾಗುತ್ತದೆ.. ಇದರಿಂದಾಗಿ ತೂಕ ಹೆಚ್ಚಾಗಬಹುದು..

ಹೆಚ್ಚು ತಿನ್ನುವುದು;
ನವವಿವಾಹಿತರು ತಡರಾತ್ರಿಯಲ್ಲಿ ಊಟ ಮಾಡುವುದು, ಪರಿಚಯಸ್ಥರು ಬಂದು ಅವರೊಂದಿಗೆ ಊಟ ಮಾಡುವುದು ಮತ್ತು ಪಾರ್ಟಿಗಳನ್ನು ಮಿಸ್‌ ಮಾಡೋದಕ್ಕೆ ಆಗದೇ ಇರುವುದು ನಡೆಯುತ್ತದೆ. ಆದ್ದರಿಂದ, ಈ ವೇಳೆಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸುತ್ತಾರೆ.. ಇದು ತೂಕವನ್ನು ಹೆಚ್ಚಿಸುತ್ತದೆ.

ಮಕ್ಕಳಾದ ಮೇಲೆ ತೂಕ ಮತ್ತಷ್ಟು ಹೆಚ್ಚಳ;

ಬಹುತೇಕ ಹೆಣ್ಣು ಮಕ್ಕಳು ಒಂದು ಮಗು ಆದ ಮೇಲೆ ಸಾಕಷ್ಟು ದಪ್ಪಗಾಗುತ್ತಾರೆ.. ಇದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ.. ಇದರ ಜೊತೆಗೆ ಈ ಮೊದಲು ಹೆಣ್ಣು ಮಕ್ಕಳು ತನ್ನ ದೇಹದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಿರುತ್ತಾರೆ.. ಆದ್ರೆ ಮಗು ಆದ ಮೇಲೆ ಮಗುವಿನ ಮೇಲಿನ ಕಾಳಜಿ ನಡುವೆ ತಮ್ಮ ಮೇಲಿನ ಕಾಳಜಿಯನ್ನು ಮರೆಯುತ್ತಾರೆ.. ಕೆಲವೊಂದು ನಿರ್ಲಕ್ಷ್ಯಗಳು ಹೆಣ್ಣು ದಪ್ಪಗಾಗಲು ಕಾರಣವಾಗುತ್ತದೆ..

Share Post