ಸಿದ್ದರಾಮಯ್ಯ ಹುಣಸೂರಿಂದ ಸ್ಪರ್ಧಿಸಿದರೆ ಗೆಲ್ಲಿಸ್ತೀವಿ; ಹೆಚ್.ವಿಶ್ವನಾಥ್
ಮೈಸೂರು; ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ವಿರುದ್ಧ ಉರಿದುಬೀಳುತ್ತಿದ್ದ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಈಗ ತಮ್ಮ ವರಸೆ ಬದಲಿಸಿದ್ದಾರೆ. ಡಿಧೀರ್ ಅಂತ ಸಿದ್ದರಾಮಯ್ಯ ಪರವಾಗಿ ಮಾತನಾಡಲು ಶುರು ಮಾಡಿದ್ದಾರೆ. ಹುಣಸೂರಿನಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುವುದಾದರೆ ಅವರನ್ನು ಗೆಲ್ಲಿಸುತ್ತೇವೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಆದವರನ್ನ ಅವಿರೋಧವಾಗಿ ಆಯ್ಕೆ ಮಾಡಬೇಕು. ಅದ್ರಲ್ಲೂ ಸಿದ್ದರಾಮಯ್ಯ ಅವರು ಐದು ವರ್ಷ ಯಶಸ್ವಿ ಆಡಳಿತ ಕೊಟ್ಟಿದ್ದಾರೆ. ಅಂತವರು ವಿಧಾನಸಭೆಯಲ್ಲಿರಬೇಕು. ಐದು ವರ್ಷಗಳ ಅನುಭವವನ್ನ ಹಂಚಿಕೊಳ್ಳಲು ಅನುಕೂಲ ಆಗುತ್ತೆ ಎಂದು ಹೇಳಿದರು. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರದ ಬಗ್ಗೆ ಮಾತನಾಡಿದ ವಿಶ್ವನಾಥ್, ರಾಜ್ಯದಲ್ಲಿ ಪರೀಕ್ಷೆಯ ಪಾವಿತ್ರತೆ ಹಾಳಾಗಿದೆ. ಪರೀಕ್ಷಾ ವ್ಯವಸ್ಥೆ ಲಂಚಮಯವಾಗಿದೆ. ಒಂದು ಪರೀಕ್ಷೆಯನ್ನ ನೀಟಾಗಿ ಮಾಡಕ್ಕಾಗಲ್ಲ ಅಂದ್ರೆ ಹೇಗೆ..? ಎಂದು ಪ್ರಶ್ನೆ ಮಾಡಿದರು.
ಗೀತಾ ಎಂಬ ವಕೀಲರನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ರು. ಅವಳು ವಿಜಯೇಂದ್ರ ಫ್ರೆಂಡ್ ಅಂತೆ. ಹಿರಿಯ ಅಧಿಕಾರಿಗಳು ಕೆಪಿಎಸ್‌ಸಿಗೆ ನೇಮಕವಾಗ್ತಿಲ್ಲ. ಕೆಪಿಎಸ್‌ಸಿ ಪಾವಿತ್ರತೆ ಹಾಳು ಮಾಡ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಮಾಡೋರೆ ಭ್ರಷ್ಟರಾದ್ರೆ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.