DistrictsPolitics

ರಾಜ್ಯ ರಾಜಕಾರಣಕ್ಕೆ ಸುಮಲತಾ ಅಂಬರೀಶ್..?: ಯಾವ ಪಕ್ಷದಿಂದ ಸ್ಪರ್ಧೆ..?

ಮಂಡ್ಯ; ಸಂಸದೆ ಸುಮಲತಾ ಅಂಬರೀಶ್‌ ರಾಜ್ಯ ರಾಜಕಾರಣಕ್ಕೆ ಬರಬೇಕೆಂಬ ಅಭಿಮಾನಿಗಳ ಒತ್ತಾಯಿಸಿದ ಹಿನ್ನಲೆ ಇಂದು ಮಂಡ್ಯದಲ್ಲಿ ಸಬೆ ಕರೆದಿದ್ದರು,ಜಿಲ್ಲೆಯ 7ವಿಧಾನಸಭಾ ಕ್ಷೇತ್ರದಿಂದ ಆಗಮಿಸಿದ ಬೆಂಬಲಿಗರೊಂದಿಗೆ ಸಭೆ ನಡೆಸಿ ಚಚಿ೯ಸಿದರು.

ಸಭೆಗೆ ಆಗಮಿಸಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಸೇರುವ ಕುರಿತು ತಮ್ಮದೆ ಆದ ಅಭಿಪ್ರಾಯಗಳನ್ನ ತಿಳಿಸಿದರು. ಕೆಲವರು ಕೈ ಪರ ಒಲವು ತೋರಿದರೆ ಇನ್ನುಕೆಲವರು ಬಿಜೆಪಿ ಪರ ಒಲವು ತೋರಿದರು.

ಅಲ್ಲದೆ ಸುಮಲತಾ ಮಂಡ್ಯ ಅಥವಾ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸ ಬೇಕೆಂದು ಅಭಿಪ್ರಾಯ ತಿಳಿಸಿದರು.ಅಂತಿಮವಾಗಿ ಸಂಸದೆ ಸುಮಲತಾ ಅಂಬರೀಶ್‌ ಯಾವ ಪಕ್ಷದಿಂದ ಕಣಕಿಳಿಯುತ್ತಾರೆ ಎಂದು ಕಾದು ನೊಡ ಬೇಕು.

Share Post