ಕೋಟ್ಯಂತರ ಆಸ್ತಿ ಇದ್ದರೂ ಬಿಪಿಎಲ್ ಕಾರ್ಡ್; ನಗರಸಭೆ ಸದಸ್ಯತ್ವ ರದ್ದು
ತುಮಕೂರು; ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ ಅದನ್ನು ಮರೆಮಾಚಿ ಬಿಪಿಎಲ್ ಕಾರ್ಡ್ ಹೊಂದಿದ್ದ ನಗರಸಭಾ ಸದಸ್ಯನ ಆಯ್ಕೆಯನ್ನು ಅಸಿಂಧುಗೊಳಿಸಿ ಶಿರಾ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಶಿರಾ ನಗರ ಸಭೆಯ ಜೆಡಿಎಸ್(JDS) ಸದಸ್ಯ ರವಿಶಂಕರ್ ರ ಸದಸ್ಯತ್ವ ಈಗ ಅಸಿಂಧುಗೊಂಡಿದೆ.
ರವಿಶಂಕರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ತನ್ನ ಬಳಿ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಉಲ್ಲೇಖಿಸಿದ್ದರು. ಕೋಟಿಗಟ್ಟಲೇ ಆಸ್ತಿ ಇದ್ದರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಉಚಿತ ರೇಷನ್ ಪಡೆಯುತ್ತಿದ್ದರು. ಈ ಮಾಹಿತಿ ತಿಳಿದಿದ್ದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಕೋರ್ಟ್ ಮೆಟ್ಟಿಲೇರಿದ್ದರು. ರವಿಶಂಕರ್ ನಾಮಪತ್ರದಲ್ಲಿ ಸುಳ್ಳುಮಾಹಿತಿ ನೀಡಿದ್ದಾರೆ. 2021ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ರವಿಶಂಕರ್ ಸದಸ್ಯತ್ವ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಪ್ರಕರಣವನ್ನು ಆಲಿಸಿದ ಶಿರಾ ಜೆಎಂಎಫ್‌ಸಿ ಕೋರ್ಟ್‌ನ ನ್ಯಾ. ಗೀತಾಂಜಲಿ ಅವರು, ವಾರ್ಡ್ ನಂಬರ್ 9 ರಿಂದ ಆಯ್ಕೆಯಾದ ರವಿಶಂಕರ್ ಸದಸ್ಯ ರದ್ದುಗೊಳಿಸಿ ಉಪ ಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ.