Districts

ದಯವಿಟ್ಟು ರಾಜ್ಯದಲ್ಲಿ ಬಂದ್‌ ಬೇಡ: ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ಡಿಸೆಂಬರ್‌ 31ರಂದು ರಾಜ್ಯದಲ್ಲಿ ಘೋಷಿಸಿರುವ ಬಂದ್‌ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳು ಘೋಷಣೆ ಮಾಡಿರುವ ಬಂದ್‌ ಸರಿಯಲ್ಲ, ಬಂದ್‌ ಮಾಡಿದ್ರೆ ಯಾರಿಗೂ ಉಪಯಾಗವಾಗುವುದಿಲ್ಲ, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ಬಡ ವರ್ಗದವರಿಗೆ ಇನ್ನಷ್ಟು ಹೊಡೆತ ಬೀಳುತ್ತದೆ. ದಯವಿಟ್ಟು ಬಂದ್‌ ಮಾಡಬೇಡಿ ಎಂದು ಜೋಶಿ ಮನವಿ ಮಾಡಿಕೊಂಡಿದ್ದಾರೆ.

ಎಂಇಎಸ್ ಬ್ಯಾನ್‌ ಮಾಡುವುದು ಅಷ್ಟು ಸುಲಭವಲ್ಲ ಅದೊಂದು ರಾಜಕೀಯ ಪಕ್ಷ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹೀಗೆ ಇದ್ದಕ್ಕಿದ್ದಂತೆ ನಿಷೇಧ ಮಾಡುವುದು ಕಷ್ಟಸಾಧ್ಯ ಎಂದ್ರು. ಕೆಲ ಸಮಾಜಘಾಥುಕ ವ್ಯಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಭಾಷಿಕರಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಇದನ್ನು ಎಲ್ಲರೂ ಅರ್ಥಮಾಡಕೊಳ್ಳಬೇಕು.

ಎರಡೂ ರಾಜ್ಯದಲ್ಲಿ ಕನ್ನಡಿಗರು, ಮರಾಠಿಗರು ವಾಸ ಮಾಡ್ತಿದಾರೆ. ಯಾರಿಗೂ ಯಾವುದೇ ರೀತಿಯ ತೊಂದರೆ ಆಗಬಾರದು. ಕೆಲ ಕಿಡಿಗೇಡಿಗಳು ಮಾಡಿದ ಕೆಲಸಕ್ಕೆ ಇನ್ಯಾರಿಗೋ ತೊಂದರೆ ಉಂಟಾಗುವುದು ಬೇಡ. ಮಹಾ ಸಿಎಂ ಠಾಕ್ರೆ ಹಾಗೂ ಪವಾರ್‌ ಅವರು ಜನೆನ್ನು ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ಕೊಡದಂತೆ ಗಮನಹರಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಗಂಭೀರ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ಪಡಬೇಕು. ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರ ಅತೀ ಬುದ್ದಿವಂತಿಕೆಯಿಂದ ಹೆಜ್ಜೆ ಇಡಬೇಕು.

ಯಾಕಂದ್ರೆ ಈಗಾಗಲೇ ಎರಡೂ ಕಡೆ ಗಲಭೆಗಳು ಶುರುವಾಗಿವೆ ಇದನ್ನು ಶಮನ ಮಾಡಲು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ವೈಮನಸ್ಸನ್ನು ತೊಲಗಿಸುವ ಕೆಲಸ ಮಾಡಬೇಕು ಎಂದಿದ್ದಾರೆ.

Share Post