ಮಹಿಳೆ ಮೇಲೆ ನವಿಲು ದಾಳಿ; ಅರಣ್ಯ ಇಲಾಖೆಗೆ ದೂರು
ಬೆಂಗಳೂರು; ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡೋದನ್ನು ನಾವು ಆಗ ನೋಡುತ್ತಲೇ ಇರುತ್ತೇವೆ. ಆದ್ರೆ, ನವಿಲು ದಾಳಿ ಮಾಡಿದ ಉದಾಹರಣೆಗಳು ಎಲ್ಲೂ ಸಿಗೋದಿಲ್ಲ. ನವಿಲುಗಳು ಬೆಳೆಗಳನ್ನು ಹಾಳು ಮಾಡುತ್ತವೆ. ಆದ್ರೆ ಮನುಷ್ಯರ ಮೇಲೆ ದಾಳಿ ಮಾಡೋದು ಕಡಿಮೆ. ಆದ್ರೆ ಇಲ್ಲೊಬ್ಬ ಮಹಿಳೆ ನನ್ನ ಮೇಲೆ ನವಿಲು ದಾಳಿ ಮಾಡಿದೆ ಎಂದು ದೂರು ಕೊಟ್ಟಿದ್ದಾಳೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸುತ್ತಮುತ್ತ ನವಿಲುಗಳು ಜಾಸ್ತಿಯಾಗಿವೆ. ಅಷ್ಟೇ ಅಲ್ಲದೆ ಗ್ರಾಮದ ಲಿಂಗಮ್ಮ ಎಂಬುವವರು ಹೊಲದ ಬಳಿ ಕೆಲಸ ಮಾಡುತ್ತಿದ್ದಾಗ ನವಿಲೊಂದು ದಾಳಿ ಮಾಡಿ ಗಾಯಗೊಳಿಸಿದೆಯಂತೆ.
ಏಕಾಏಕಿ ನವಿಲು ದಾಳಿ ಮಾಡಿದ್ದು, ಲಿಂಗಮ್ಮ ಅವರ ಎಡಗಣ್ಣಿಗೆ ಗಾಯವಾಗಿದೆ. ಇದೊಂದೇ ಘಟನೆಯಲ್ಲ, ಕಳೆದ ಒಂದು ವಾರದಿಂದ ಇಂತಹ ಘಟನೆಗಳು ಸಾಕಷ್ಟು ನಡೆದಿವೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೂ ದೂರು ನೀಡಲಾಗಿದೆ.