DistrictsPolitics

ಮೋದಿ ವಿಷದ ಹಾವಿದ್ದಂತೆ; ಯೂಟರ್ನ್‌ ಹೊಡೆದ ಮಲ್ಲಿಕಾರ್ಜುನ ಖರ್ಗೆ

ಗದಗ; ಪ್ರಧಾನಿ ನರೇಂದ್ರ ಮೋದಿ ವಿಷದ ಹಾವು ಇದ್ದಂತೆ ಎಂದು ಹೇಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದ ಉಂಟಾಗುತ್ತಿದ್ದಂತೆ ತಮ್ಮ ಮಾತು ಬದಲಿಸಿದ್ದಾರೆ. ನಾನು ಯಾರನ್ನೂ ವೈಯಕ್ತಿಕವಾಗಿ ಮಾತನಾಡಲು ಬಯಸಿರಲಿಲ್ಲ. ಬಿಜೆಪಿ ವಿಷದ ಹಾವಿದ್ದಂತೆ ಹೇಳಿದ್ದೆ ಎಂದು ಹೇಳಿದ್ದಾರೆ.

ನರೇಗಲ್‌ ಪಟ್ಟಣದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಮೋದಿ ವಿಷದ ಹಾವು ಇದ್ದಂತೆ. ಚೆನ್ನಾಗಿದ್ದಾರೆ ಎಂದು ನೆಕ್ಕಿ ನೋಡೋಕೆ ಹೋದರೆ ಸತ್ತೇ ಹೋಗುತ್ತೀರಿ ಎಂದು ಹೇಳಿದ್ದರು. ಖರ್ಗೆಯವರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ಖಂಡನೆಗಳು ಜಾಸ್ತಿಯಾಗುತ್ತಿದ್ದಂತೆ ಖರ್ಗೆ ಯೂಟರ್ನ್‌ ಹೊಡೆದಿದ್ದಾರೆ. ರೋಣ ಪಟ್ಟಣದಲ್ಲಿ ಸಮಜಾಯಿಷಿ ನೀಡಿದ ಖರ್ಗೆ, ಮೋದಿ ಎಂದರೆ ಬಿಜೆಪಿ ಎಂದರ್ಥ. ಬಿಜೆಪಿ ಪಾರ್ಟಿ ಹಾವು ಇದ್ದಂಗೆ. ಸ್ವಲ್ಪ ನೆಕ್ಕಿ ನೋಡ್ತೆವಿ ಅಂದ್ರೆ ಅಲ್ಟಿಮೆಟ್ಲಿ ಡೆತ್ ಅಂತೇಳಿದ್ದೆ ಅಂತ ಖರ್ಗೆ ಸಮಜಾಯಿಷಿ ನೀಡಿದ್ದಾರೆ.

Share Post