ಕೇರಳದಲ್ಲಿ ತರಬೇತಿ ಪಡೆದು ಬಂದು ಕೃತ್ಯ; ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಮುತಾಲಿಕ್ ಆಗ್ರಹ
ಬೆಂಗಳೂರು: ಹಿಂದೂ ಪರ ಕಾರ್ಯಕರ್ತ ಹರ್ಷ ಮೇಲೆ ಈ ಹಿಂದೆ ಎಂಟರಿಂದ ಹತ್ತು ಬಾರಿ ಹಲ್ಲೆಯಾಗಿತ್ತು. ಹೀಗಿದ್ದರೂ ಪೊಲೀಸರು ಎಚ್ಚೆತ್ತುಕೊಂಡಿರಲಿಲ್ಲ. ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಅನ್ಯಕೋಮಿನ ಕೆಲ ಗೂಂಡಾಗಳು ಈ ಕೃತ್ಯ ಎಸಗಿದ್ದಾರೆ. ಅವರು ಕೇರಳದಲ್ಲಿ ತರಬೇತಿ ಪಡೆದುಬಂದು ಹರ್ಷನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ಅಪ್ಘಾನಿಸ್ತಾನ್ ಅಲ್ಲ, ಭಾರದಲ್ಲಿ ಕಾನೂನು ಅನ್ನೋದು ಇದೆ. ಕಾನೂನು ಉಲ್ಲಂಘಿಸಿ ಮಚ್ಚು, ಲಾಂಗು ಹಿಡಿದುಕೊಂಡು ಬಂದರೆ ಸುಮ್ಮನಿರೋದಿಲ್ಲ ಎಂದು ಮುತಾಲಿಕ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಇಂತಹ ಕೃತ್ಯಗಳು ನಡೆಯದಂತೆ ತಡೆಯಬೇಕು. ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಮುತಾಲಿಕ್ ಆಗ್ರಹಿಸಿದರು. ಕೊಲೆಯಾದ ಹರ್ಷ ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಮುತಾಲಿಕ್ ಆಗ್ರಹಿಸಿದರು.