Districts

ಕೊಡಗಿನಲ್ಲಿ ಮತ್ತೆ ನಡುಗಿದ ಭೂಮಿ; ಇದು ಏಳನೇ ಬಾರಿ ಕಂಪನ

ಮಡಿಕೇರಿ; ಕೊಡಗು ಜಿಲ್ಲೆಯಲ್ಲಿ ಭೂಮಿ ಮತ್ತೆ ನಡುಗಿದೆ.  ಕಳೆದ ಕೆಲ ದಿನಗಳಿಂದ 7ನೇ ಬಾರಿ ಭೂಮಿ ಕಂಪಿಸಿದಂತೆ ಅನುಭವವಾಗಿದೆ. ಇದರಿಂದಾಗಿ ಜನ‌ರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.

ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಹಾಗೂ ಕರಿಕೆಯಲ್ಲಿ ಭೂಮಿ ಮತ್ತೆ ನಡುಗಿದೆ. ಇಂದು ಮಧ್ಯಾಹ್ನ 1.20ರ ಸುಮಾರಿಗೆ ಭಾರಿ ಶಬ್ದದೊಂದಿಗೆ 3/4 ಸೆಕೆಂಡ್ ಭೂಮಿ​ ಕಂಪಿಸಿದೆ. ಕರಿಕೆ, ಪೆರಾಜೆ ಮಂಗಳೂರು ಗಡಿ ಭಾಗ ಬೆಟ್ಟ ಗುಡ್ಡಗಳಿಂದ ಕೂಡಿದೆ.

ಇಲ್ಲಿ ಮಣ್ಣು ಕುಸಿತವಾದರೆ ಭಾರಿ ಅನಾಹುತ ಎದುರಾಗುವ ಸಂಭವ ಇದೆ. ಆದ್ದರಿಂದ ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಭೂಮಿ ಕಂಪನಕ್ಕೆ ನಿಖರವಾದ ಮಾಹಿತಿ ಅರಿತು, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸೇರಿಸುವ ಕೆಲಸ ಮಾಡಬೇಕೆಂಬ ಒತ್ತಾಯ ಹೆಚ್ಚಾಗಿದೆ.

Share Post