CrimeDistricts

ಮುರುಘಾ ಮಠಕ್ಕೆ ಆಗಮಿಸಿದ ಶಿವಮೂರ್ತಿ ಶರಣರು; ಪಲಾಯನವಾದ ಇಲ್ಲ ಎಂದ ಶ್ರೀಗಳು

ಚಿತ್ರದುರ್ಗ; ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗ್ತಿದ್ದ ಮುರುಘಾ ಮಠದ ಶರಣರು ಮಠಕ್ಕೆ ವಾಪಸ್ಸಾಗಿದ್ದಾರೆ.  ಮಠಕ್ಕೆ ಬರುತ್ತಿದ್ದಂತೆ ಅವರು ಎಲ್ಲರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಮೂಲಕ ತಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವಿಚಾರವನ್ನು ಅಲ್ಲಗೆಳೆದಿದ್ದಾರೆ. 

ಪೊಲೀಸ್‌ ಭದ್ರತೆಯಲ್ಲೇ ಮಠಕ್ಕೆ ಬಂದ ಸ್ವಾಮೀಜಿಗಳು, ನಾವು ಈ ನೆಲದ ಕಾನೂನನ್ನು ಗೌರವಿಸುವಂತಹವರು. ಹೀಗಾಗಿ ಯಾವುದೇ ಪಲಾಯನ ವಾದ ಮಾಡೋದಿಲ್ಲ ಎಂದು ಹೇಳಿದ್ದಾರೆ. ಏನೋ ಒಂದು ಅಹಿತಕರ ಸಂದರ್ಭ ಎದುರಾಗಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣುತ್ತೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.

ಎದುರಾಗಿರುವ ಸಮಸ್ಯೆಯನ್ನು ಶಾಂತವಾಗಿ ಬಗೆಹರಿಸೋಣ. ಇದೇನು ಹೊಸದಲ್ಲ, ಕಳೆದ ಹದಿನೈದು ವರ್ಷಗಳಿಂದ ನಡೆಯುತ್ತಿದೆ. ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ. ಎಲ್ಲಾ ಆರೋಪದಿಂದ ಮುಕ್ತನಾಗಿ ಬರುತ್ತೇನೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಠದ ಒಳಗೆ ನಡೆಯುತ್ತಿದ್ದ ಪಿತೂರಿಗಳು ಈಗ ಹೊರಗೆ ನಡೆಯುತ್ತಿವೆ. ಭಕ್ತಾಧಿಗಳು ಹೆದರುವಂತಹ ಅಗತ್ಯವಿಲ್ಲ ಎಂದೂ ಶ್ರೀಗಳು ಹೇಳಿದ್ದಾರೆ.

ಮುರುಘಾ ಶರಣರು ಕಳೆದ ಮಧ್ಯರಾತ್ರಿಯಿಂದ ಮಠದಲ್ಲಿ ಇರಲಿಲ್ಲ. ಈ ನಡುವೆ ಹಾವೇರಿ ಬಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಶ್ರೀಗಳು ಸ್ವತಃ ಮಠಕ್ಕೆ ಆಗಮಿಸಿದ್ದಾರೆ. ಎಲ್ಲಾ ಅನುಮಾನಗಳಿಗೂ ಅವರೇ ಉತ್ತರ ಕೊಟ್ಟಿದ್ದಾರೆ.

Share Post