CrimeNational

ಅಮಿತ್‌ ಶಾ ಬಳಿಗೆ ನುಗ್ಗಿದ ನಕಲಿ ಭದ್ರತಾ ಅಧಿಕಾರಿ; ಬಂಧನ

ಮುಂಬೈ; ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಿನ್ನೆ ಮುಂಬೈಗೆ ಭೇಟಿ ನೀಡಿದ್ದರು. ಈ ವೇಳೆ ವ್ಯಕ್ತಯೊಬ್ಬ ಭದ್ರತಾ ಅಧಿಕಾರಿ ಎಂದು ಹೇಳಿಕೊಂಡು ಅಮಿತ್‌ ಶಾ ಬಳಿ ನುಗ್ಗಲು ಯತ್ನಿಸಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಆರೋಪಿ ಆಂಧ್ರಪ್ರದೇಶ ಮೂಲದವನು ಎಂದು ಗೊತ್ತಾಗಿದೆ. ಆತ ಆಂಧ್ರಪ್ರದೇಶ ಸಂಸದರೊಬ್ಬರ ಖಾಸಗಿ ಭದ್ರತಾ ಸಿಬ್ಬಂದಿಯಾಗಿದ್ದಾನೆ. ಆತ ಯಾಕೆ ಈ ಪ್ರಯತ್ನ ಮಾಡಿದ ಎಂದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಮುಂದುವರೆದಿದೆ.

Share Post