CrimeDistricts

ಅಕ್ರಮ ಮರಳು ಸಾಗಣೆಗೆ ಪೊಲೀಸ್‌ ಕಾನ್ಸ್‌ಟೇಬಲ್‌ ಬಲಿ; ಟ್ರ್ಯಾಕ್ಟರ್‌ ಹತ್ತಿಸಿದ ದುರುಳರು..!

ಕಲಬುರಗಿ; ಅಕ್ರಮ ಮರಳು ಸಾಗಣೆ ಎಲ್ಲೆಡೆ ಅವ್ಯಾಹತವಾಗಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನು ತಡೆಹೋದ ಹೋದ ಪೊಲೀಸ್‌ ಪೇದೆಯೊಬ್ಬರು ಬಲಿಯಾಗಿದ್ದಾರೆ. ಮರಳು ದಂಧೆಕೋರರು ಪೊಲೀಸ್‌ ಪೇದೆ ಮೇಲೆ ಟ್ರ್ಯಾಕ್ಟರ್‌ ಹತ್ತಿಸಿ ಕೊಲೆ ಮಾಡಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಬಳಿ ಈ ಕೃತ್ಯ ಎಸಗಲಾಗಿದೆ. ನೆಲೋಗಿ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಮಯೂರ (50) ಮರಳು ದಂಧೆಕೋರರಿಗೆ ಜೀವತೆತ್ತಿದ್ದಾರೆ. ಕರ್ತವ್ಯದ ಮೇಲಿದ್ದ ಮಯೂರ ಅವರು ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ತಡೆದಿದ್ದಾರೆ. ಈ ವೇಳೆ ಅವರ ಕೋತಿದ್ದ ಬೈಕ್‌ ಮೇಲೆ ಟ್ರ್ಯಾಕ್ಟರ್‌ ಹತ್ತಿಸಲಾಗಿದೆ. ಟ್ರ್ಯಾಕರ್‌ನ ಒಂದು ಟೈಯರ್‌ ಮಯೂರ ಅವರ ತಲೆಯ ಮೇಲೆ ಹತ್ತಿದ್ದು, ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

Share Post