CrimeNational

ಅಪಘಾತದಲ್ಲಿ ಕಾಂಗ್ರೆಸ್‌ ಮಾಜಿ ಶಾಸಕನ ಪತ್ನಿ ದುರ್ಮರಣ

ನವದೆಹಲಿ; ದೆಹಲಿಯ ಕಾಶ್ಮೀರ್‌ ಗೇಟ್‌ ಪ್ರದೇಶದಲ್ಲಿ ಕಾಂಗ್ರೆಸ್‌ ಮಾಜಿ ಶಾಸಕನ ಪತ್ನಿ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಘಟನೆಯಲ್ಲಿ ಮಾಜಿ ಶಾಸಕನ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಮಾಜಿ ಶಾಸಕ ರಾಜೇಶ್‌ ಲಿಲೋಥಿಯಾ ಅವರ ಪತ್ನಿ ಮಧು ಲಿಲೋಥಿಯಾ ಮೃತಪಟ್ಟವರು. ಮಧು ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಅಪಘಾತದ ನಂತರ ಎಸ್‌ಯುವಿ ಕಾರು ಚಾಲಕ ಪರಾರಿಯಾಗಿದ್ದ. ಆತನನ್ನು ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೀಲಾಂಪುರ ನಿವಾಸಿ ಜೈನುಲ್ ಎಂಬಾತನೇ ಆರೋಪಿ ಎಂದು ತಿಳಿದುಬಂದಿದೆ.

Share Post