CrimeNational

50 ಮದುವೆ ಮಾಡಿಕೊಂಡಿರೋ ತಮಿಳುನಾಡಿನ ಮಹಿಳೆ!; ಪೊಲೀಸ್‌ ಅಧಿಕಾರಿಗಳಿಗೂ ಮೋಸ!

ತಮಿಳುನಾಡಿನ ತಿರುಪುರ್‌ನ ಒಬ್ಬ ಯುವಕನಿಗೆ 35 ವರ್ಷ ತುಂಬಿದರೂ ಮದುವೆಯಾಗಿರಲಿಲ್ಲ.. ಈ ನಡುವೆ ಸಂಧ್ಯಾ ಎಂಬ ಮಹಿಳೆ ʻಡೇಟ್ ದಿ ತಮಿಳು ವೇʼ ಎಂಬ ವೆಬ್‌ಸೈಟ್‌ನಲ್ಲಿ ಪರಿಚಯವಾಗುತ್ತಾಳೆ.. ಇಬ್ಬರಿಗೂ ಇಷ್ಟವಾಗಿ, ಮದುವೆಯೂ ಆಗುತ್ತಾರೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದ ಸಮಯದಲ್ಲಿ ಕಿರಿಕಿರಿ ಶುರುವಾಗುತ್ತದೆ.. ಮದುವೆಯಾಗಿ ಮೂರು ತಿಂಗಳಾಗುವಷ್ಟರಲ್ಲಿ ಆಕೆಯ ವರ್ತನೆಯಲ್ಲಿ ಏನೋ ಬದಲಾವಣೆ ಕಾಣುತ್ತದೆ. ದಿನವೂ ಗಂಡನಿಗೆ ಕಿರಿಕಿರಿ ಮಾಡಲು ಶುರು ಮಾಡುತ್ತಾಳೆ..

ಅನುಮಾನಗೊಂಡ ಯುವಕ ಸಂಧ್ಯಾಳ ಆಧಾರ್ ಕಾರ್ಡ್ ಪರಿಶೀಲಿಸ್ತಾನೆ.. ನೋಡಿದರೆ ಅದರಲ್ಲಿ ಗಂಡನ ಹೆಸರು ಬೇರೆ ಇರುತ್ತದೆ. ಈ ಬಗ್ಗೆ ಕೇಳಿದರೆ ಕೊಲೆ ಮಾಡುವುದಾಗಿ ಪತಿಗೆ ಬೆದರಿಕೆ ಹಾಕಿದ್ದಾಳೆ. ಯುವಕ ಆಕೆಗೆ ಗೊತ್ತಿಲ್ಲದಂತೆ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಸಂಧ್ಯಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಪೊಲೀಸರೇ ಬೆಚ್ಚಬಿದ್ದಿದ್ದಾರೆ.. ಯಾಕಂದ್ರೆ ಆಕೆ ಬರೋಬ್ಬರು 50 ಮಂದಿಯನ್ನು ಮದುವೆಯಾಗಿದ್ದಾಳೆ..

ಆರೋಪಿ ಡಿಎಸ್ಪಿ, ಇನ್ಸ್‌ಪೆಕ್ಟರ್, ಮಧುರೈನ ಮತ್ತೊಬ್ಬ ಪೊಲೀಸ್ ಅಧಿಕಾರಿ ಮತ್ತು ಹಣಕಾಸು ಅಧಿಕಾರಿ ಸೇರಿ ಹಲವು ಅಧಿಕಾರಿಗಳನ್ನೇ ಬಲೆಗೆ ಬೀಳಿಸಿ ಅವರನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ ಅನ್ನೋದು ಗೊತ್ತಾಗಿದೆ..

 

Share Post