ಜೇಮ್ಸ್ ಥಿಯೇಟರ್ ಗೊಂದಲಕ್ಕೆ ತೆರೆ: ಸಿಎಂ, ಶಿವರಾಜ್ ಕುಮಾರ್ ಎಂಟ್ರಿಯಿಂದ ಸುಖಾಂತ್ಯ
ಬೆಂಗಳೂರು: ಜೇಮ್ಸ್ ಸಿನಿಮಾ ಥಿಯೇಟರ್ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಅಭಿಮಾನಿಗಳಿಗೂ ಇದ್ದ ಗೊಂದಲಕ್ಕೆ ಬ್ರೇಕ್ ಹಾಕಲಾಗಿದೆ. ಸಿಎಂ ಬೊಮ್ಮಾಯಿ, ಫಿಲ್ಮ್ ಚೆಂಬರ್ ಅಧ್ಯಕ್ಷರು, ಪದಾಧಿಕಜಾರಿಗಳು, ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಂತಾಗಿದೆ.
ಈ ಬಗ್ಗೆ ಫಿಲ್ಮ್ ಚೇಂಬರ್‌ನಲ್ಲಿ ನಟ ಶಿವರಾಜ್ ಕುಮಾರ್ ಮಾತನಾಡಿ. ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ಅಭಿಮಾನಿಗಳ ಸಂಕ್ಯೆ ಹೆಚ್ಚಿರುವ ಕಾರಣದಿಂದ 396ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಿದ್ವಿ. ಬರು ಬರುತ್ತಾ ವೀಕ್ಷಕರ ಸಂಖ್ಯೆ ಕಡಿಮೆ ಆದಂತೆ ಕೆಲವು ಥಿಯೇಟರ್‌ಗಳಲ್ಲಿ ಮೊದಲ ಶೋಗೆ ಮಾತ್ರ ಅನುಮತಿ ನೀಡುವುದಾಗಿ ಮಾತುಕತೆ ಕೂಡ ಆಗಿತ್ತು ಅದರಂತೆಯೇ ನಡೆಯಲಾಗಿದೆ. ಥಿಯೇಟರ್ ಸಮಸ್ಯೆ ಯಾವತ್ತೂ ಇದ್ದೇ ಇರುತ್ತದೆ. ಸಿನಿಮಾ ಚೆನ್ನಾಗಿ ಓಡ್ತಿದೆ ಅಂದರೆ ಅದನ್ನು ತೆಗೆಯುವುದು ಸರಿಯಲ್ಲ ಅಂತಹ ಕೆಲಸವನ್ನು ನಾವು ಮಾಡಲ್ಲ.
ರಾಜ್ಯದಲ್ಲಿ ಜೇಮ್ಸ್ ಸಿನಿಮಾ ಮುಂದುವರೆಯಲಿದೆ. ಸಿಎಂ ಬಸವರಾಜ್ ಬೊಮ್ಮಾಯಿ. ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್, ಸಿನಿಮಾ ಬಿರ್ಮಾಪಕರು ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸಿದ್ದಾರೆ. ಚಿತ್ರರಂಗ ಎಂಬುದು ಒಂದು ಕುಟುಂಬ ಇದ್ದ ಹಾಗೆ. ಬರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗಬೇಕು. ಅಪ್ಪು ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ಒಂದು ಎಮೋಷನ್ಸ್ ಅದು ನಮಗೆ ರಕ್ತದ ಕಣದಲ್ಲೇ ಇದೆ. ಸಮಸ್ಯೆ ಬಗ್ಗೆ ಸಿಎಂ ಖುದ್ದು ಆಲಿಸಿದ್ದಾರೆ. ಯಾವುದೇ ಭಾಷೆಯ ಸಿನಿಮಾ ಆದರೂ ಬರಲಿ. ಅದು ಅದ್ಭುತವಾಗಿ ತೆರೆ ಕಾಣ್ತಿದ್ರೆ ಅದನ್ನು ತೆಗೆಯಿರಿ ಎಂದು ಹೇಳೋದು ಧರ್ಮ ಅಲ್ಲ. ಎಲ್ಲದರಲ್ಲೂ ಹುಳುಕು ಹುಡುಕುವುದು ಸರಿಯಲ್ಲ ಎಂದು ಶಿವರಾಜ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ.