Bengaluru

ಸಿಲಿಕಾನ್‌ ಸಿಟಿಗೆ ಮತ್ತೆ ಡಬಲ್‌ ಡೆಕ್ಕರ್‌ ಬಸ್‌ಗಳ ಎಂಟ್ರಿ; ಯಾವಾಗ ಗೊತ್ತಾ..?

ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರಿಗೆ ಡಬಲ್ ಡೆಕ್ಕರ್ ಬಸ್ ಗಳು ಮತ್ತೆ ಎಂಟ್ರಿ ಕೊಡಲಿದೆ. ಗತಕಾಲದ ವೈಭವ ಸಾರುವ ಬಸ್ ಗಳನ್ನ ರಸ್ತೆಗಿಳಿಸಲು ಬಿಎಂಟಿಸಿ ಪ್ಲಾನ್ ಮಾಡಿಕೊಂಡಿದೆ.

ಏಪ್ರಿಲ್ ತಿಂಗಳಲ್ಲಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ಗಳು ಸಂಚಾರ ಮಾಡಲಿವೆ. ಡಬಲ್ ಡೆಕ್ಕರ್ ಬಸ್ಗಳ ಖರೀದಿಗೆ ಈಗಾಗಲೇ ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಕರೆದಿದ್ದು 4 ಕಂಪನಿಗಳು ಭಾಗಿಯಾಗಿವೆ. ಬಳಿಕ ಟೆಂಡರ್ ಕರೆಯಲು ಬಿಎಂಟಿಸಿ ತಯಾರಿ ಮಾಡಿಕೊಂಡಿದೆ.

ಮೊದಲ ಹಂತದಲ್ಲಿ 4 ಬಸ್ ಖರೀದಿಸಿ ಸಿಟಿ ಹಾಗೂ ಔಟರ್ ರಿಂಗ್ ರೋಡಲ್ಲಿ ಪ್ರಯೋಗಿಕವಾಗಿ ಓಡಿಸಲಾಗುತ್ತದೆ. ಸಿಟಿ ಸರ್ವೆಗೆ ಮುಂದಾಗಿರುವ ಬಿಎಂಟಿಸಿ ನಿಗಮ 4.6 ಮೀಟರ್ ಉದ್ದದ 70 ಸೀಟ್ ಕೆಪಾಸಿಟಿಯ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಖರೀದಿ ಮಾಡಲಾಗುತ್ತಿದೆ.

Share Post