ಚನ್ನಗಿರಿಯಲ್ಲೇ ಇದ್ದರೂ ಮಾಡಾಳ್‌ರನ್ನು ಯಾಕೆ ಬಂಧಿಸಲಿಲ್ಲ; ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು; ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ನಾನು ನನ್ನ ಸ್ವಗ್ರಾಮದಲ್ಲೇ ಇದ್ದೆ ಎಂದು ಹೇಳಿಕೊಂಡಿದ್ದಾರೆ. ಹಾಗಾದ್ರೆ ಪೊಲೀಸರು ಏನು ಮಾಡುತ್ತಿದ್ದರು..? ಯಾಕೆ ಅವರನ್ನು ಬಂಧಿಸಿಲ್ಲ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಮಧ್ಯಂತರ ಜಾಮೀನು ಸಿಕ್ಕ ಮೇಲೆ ಮಾಡಾಳ್ ಆರು ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡುತ್ತಾ ಅವರು, ನಾನು ಇಲ್ಲಿಯೇ ಇದ್ದೆ ಎಂದು ಹೇಳಿದ್ದಾರೆ. ಹೀಗಾಗಿ, ಕಾಂಗ್ರೆಸ್ ಈ ಬಗ್ಗೆ ಟ್ವೀಟ್ ಮಾಡಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಟ್ವೀಟ್;
“ನಾನು ಎಲ್ಲೂ ತಲೆಮರೆಸಿಕೊಂಡಿರಲಿಲ್ಲ ಚನ್ನಗಿರಿಯಲ್ಲೇ ಇದ್ದೆ” – ಮಾಡಾಳ್ ವೀರೂಪಾಕ್ಷಪ್ಪ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರು ಬಂಧಿಸಿರಲಿಲ್ಲ ಏಕೆ? ಬಂಧಿಸದಂತೆ ನೋಡಿಕೊಂಡವರು ಯಾರು? ಇಂಟಲಿಜೆನ್ಸ್ ಹಾಗೂ ಪೊಲೀಸರು ಇಷ್ಟೊಂದು ಅಸಮರ್ಥರೇ?
@BSBommai ಅವರು ರಾಜ್ಯಕ್ಕೆ ಉತ್ತರಿಸಲೇಬೇಕು?