ಇಂದು ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ; 24 ಸಚಿವರ ಪ್ರಮಾಣವಚನ
ಬೆಂಗಳೂರು; ಇಂದು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಕಳೆದ ಶನಿವಾರ ಸಿಎಂ, ಡಿಸಿಎಂ ಸೇರಿ ಹತ್ತು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 34 ಮಂದಿಗೆ ರಾಜ್ಯಸಚಿವ ಸಂಪುಟ ಸೇರುವ ಅವಕಾಶವಿದ್ದು, ಇನ್ನು ಉಳಿದ 24 ಮಂದಿಗೆ ಇಂದು ಪ್ರಮಾಣವಚನ ಬೋಧಿಸಲಾಗುತ್ತದೆ. ಇಂದು ಬೆಳಗ್ಗೆ 11.45ಕ್ಕೆ ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ 24 ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಂತಾಗುತ್ತದೆ.
ಇನ್ನು ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜಭನವದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ ಸುಮಾರು 2700 ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಇದರಲ್ಲಿ 17 ಡಿಸಿಪಿ, 37 ಎಸಿಪಿ, 114 ಇನ್ಸ್ ಪೆಕ್ಟರ್ , 208 ಪಿಎಸ್ಐ ಸೇರಿದ್ದಾರೆ.
ಇಂದು ಪ್ರಮಾಣವಚನ ಸ್ವೀಕರಿಸುವವರು;
ಹೆಚ್.ಕೆ.ಪಾಟೀಲ್
ಕೃಷ್ಣಭೈರೇಗೌಡ
ಚಲುವರಾಯಸ್ವಾಮಿ
ಪಿರಿಯಾಪಟ್ಟಣ ವೆಂಕಟೇಶ್
ಡಾ.ಹೆಚ್.ಸಿ.ಮಹದೇವಪ್ಪ
ಈಶ್ವರ ಖಂಡ್ರೆ
ಕೆ.ಎನ್.ರಾಜಣ್ಣ
ದಿನೇಶ್ ಗುಂಡೂರಾವ್
ಶರಣಬಸಪ್ಪ ದರ್ಶನಾಪುರ
ಶಿವಾನಂದ ಪಾಟೀಲ್
ಆರ್.ಬಿ.ತಿಮ್ಮಾಪುರ
ಎಸ್.ಎಸ್.ಮಲ್ಲಿಕಾರ್ಜುನ
ಶಿವರಾಜ ತಂಗಡಗಿ
ಡಾ.ಶರಣ ಪ್ರಕಾಶ್ ಪಾಟೀಲ್
ಮಂಕಾಳು ವೈದ್ಯ
ಲಕ್ಷ್ಮೀ ಹೆಬ್ಬಾಳ್ಕರ್
ರಹೀಂ ಖಾನ್
ಡಿ.ಸುಧಾಕರ್
ಸಂತೋಷ್ ಲಾಡ್
ಬೋಸರಾಜು
ಬಿ.ಎಸ್.ಸುರೇಶ್
ಮಧು ಬಂಗಾರಪ್ಪ
ಎಂ.ಸಿ.ಸುಧಾಕರ್
ಬಿ.ನಾಗೇಂದ್ರ