Bengaluru

ವಿವಾದ ಸೃಷ್ಟಿಸಿದ ಹೇಳಿಕೆ ವಾಪಸ್‌ ಪಡೆದ ತೇಜಸ್ವಿ ಸೂರ್ಯ

ಬೆಂಗಳೂರು: ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದ ಕಾರ್ಯಕ್ರಮದಲ್ಲಿ ಮತಾಂತರ ವಿಚಾರವಾಗಿ ವಿವಾದಿತ ಹೇಳಿಕೆಯನ್ನು ನೀಡಿದ್ರು. ಈ ಹೇಳಿಕೆ ವಿವಾದಕ್ಕೆ ಎಡಮಾಡಿಕೊಟ್ಟ ಕಾರಣ ಇಂದು ಟ್ವೀಟ್‌ ಮಾಡಿ ತಮ್ಮ ಹೇಳಿಕೆಯನ್ನು ವಾಪಸ್‌ ಪಡೆದಿರುವುದಾಗಿ ತಿಳಿಸಿದ್ದಾರೆ.

ಮಠದಲ್ಲಿ ತೇಜಸ್ವಿ ಸೂರ್ಯ ಹೇಳಿಕೆ
ಮೊನ್ನೆ ಕೃಷ್ಣ ಮಠದ ಕಾರ್ಯಕ್ರಮದಲ್ಲಿ ಹಿಂದೂ ಪುನರುಜ್ಜೀವನ ವಿಚಾರ ಕುರಿತಂತೆ ಮಾತನಾಡಿದ ತೇಜಸ್ವಿ ಸೂರ್ಯ ಮತಾಂತರ ಬಗ್ಗೆ ಹೇಳಿದ್ರು. ಭಾರತ ಬಿಟ್ಟು ಹೋದ ಎಲ್ಲಾ ಮುಸಲ್ಮಾನರನ್ನು ವಾಪಸ್‌ ಕರೆತರಬೇಕು. ಅಂದ್ರೆ ಪಾಕಿಸ್ತಾನ, ಚೀನಾ, ಜಪಾನ್‌ ಹೀಗೆ ಬೇರೆ ದೇಶದಲ್ಲಿ ಯಾವುದೋ ಒತ್ತಡಕ್ಕೆ ಸಿಲುಕಿ ಹಿಂದೂ ಧರ್ಮದಿಂದ ಮತಾಂತರಗೊಂಡ ಎಲ್ಲಾ ಮುಸಲ್ಮಾನರು ವಾಪಸ್‌ ಭಾರತಕ್ಕೆ ಹಿಂದೂಗಳಾಗಿ ಮರುಮತಾಂತರವಾಗಬೇಕು. ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ಮನೆಯ ಅಕ್ಕ ಪಕ್ಕದಿಂದಲೇ ಇದನ್ನು ಕಾರ್ಯಗತಗೊಳಿಸಬೇಕು. ನಾವು ಕಾಣುವ ಕನಸು ದೊಡ್ಡದಾಗಿರಬೇಕು. ಭಾರತದಲ್ಲಿರುವ ಮಠ-ಮಂದಿರಗಳು ಇದರ ನೇತೃತ್ವ ವಹಿಸಬೇಕು. ಟಿಪ್ಪು ಸುಲ್ತಾನ್‌ ಜಯಂತಿಯಂದೇ ಮುಸಲ್ಮಾನರ ಮರು ಮತಾಂತರ ಕಾರ್ಯ ನಡೆಯಬೇಕು ಎಂದು ಹೇಳಿದ್ರು.

Share Post