ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ಗಿಫ್ಟ್; ಯಾರಿಗೆ ಎಷ್ಟು ಪರ್ಸೆಂಟ್..?
ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವ ಹೊತ್ತಿನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನರಿಗೆ ಮೀಸಲಾತಿಯ ಗಿಫ್ಟ್‌ಕೊಟ್ಟಿದ್ದಾರೆ. ಸಂಪುಟ ಸಭೆಯಲ್ಲಿ ತಗೆದುಕೊಂಡ ನಿರ್ಧಾರದಂತೆ ಮೀಸಲಾತಿ ಗಿಫ್ಟ್ ಕೊಟ್ಟಿದ್ದಾರೆ. ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ಈಗ ಅದು ಅನುಷ್ಟಾನದಲ್ಲಿ ಇದೆ. ಸ್ಪೃಶ್ಯರು, ಅಸ್ಪೃಶ್ಯರು ಸೇರಿ ಒಳಗೊಂಡಂತೆ ಎಸ್ಸಿಗಳಲ್ಲಿ 101 ಪಂಗಡಗಳಿವೆ. ಭೋವಿ,ಲಂಬಾಣಿ, ಕೊರಚ, ಕೊರ್ಮ ಮೂಲ ಶೆಡ್ಯೂಲ್ ಕಾಸ್ಟ್ ನಲ್ಲಿ ಇದ್ದಾರೆ. ಎಸ್ಸಿ ಮೀಸಲಾತಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಆರ್ಟಿಕಲ್ 341/2 ಅನ್ವಯ ನಾಲ್ಕು ಗುಂಪುಗಳಿಗೂ ಎಸ್ಸಿ ಲೆಫ್ಟ್, ರೈಟ್, ಅನ್ ಟಚ್ಚೆಬಲ್ ಇತರರು, ಎಡಕ್ಕೆ ಶೇ.6, ಬಲಕ್ಕೆ ಶೇ.5.5 ಟಚ್ಚಬಲ್ ಹಾಗೂ 4.5 ಇತರರಿಗೆ ಶೇ.1 ರಷ್ಟು ಮೀಸಲಾತಿ ನೀಡಲಾಗಿದೆ.
ಎಲ್ಲಾ ಸಮುದಾಯದಲ್ಲೂ ನಿರೀಕ್ಷೆಗಳು ಜಾಸ್ತಿ ಆಗಿದೆ. ನಾವು ವಿದ್ಯಾವಂತರರಾಗಬೇಕು, ಉದ್ಯೋಗ ಪಡೆಯಬೇಕು ಎಂಬ ಆಕಾಂಕ್ಷೆ ಹೆಚ್ಚಿದೆ. ಬಹಳಷ್ಟು ಬೇಡಿಕೆಗಳೊಂದಿಗೆ ಹೋರಾಟಗಳು ನಡೆಯುತ್ತಿವೆ. ಎಲ್ಲಾ ಸಮುದಾಯಗಳ ಆಶೋತ್ತರಗಳನ್ನ ಈಡೇರಿಸಲು ಮುಂದಾದರೆ ಜೇನುಗೂಡಿಗೆ ಕೈ ಹಾಕಿದಂತೆ ಎಂಬ ಭಾವನೆ ಇದೆ. ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈಗ ಅದು ಅನುಷ್ಟಾನದಲ್ಲಿ ಇದೆ.. ಸಮುದಾಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗುತ್ತದೆ. ಆರ್ಟಿಕಲ್ 342 ಅನ್ವಯ 4 ಗುಂಪುಗಳಲ್ಲಿ ವರ್ಗೀಕರಣ ಮಾಡಲಾಗಿದೆ.
4 ಗುಂಪುಗಳಾಗಿ ವರ್ಗೀಕರಣ
ಗುಂಪು 1 – ರಲ್ಲಿ
ಎಡಗೈ ಸಮುದಾಯದ ಗುಂಪಿಗೆ ಶೇ.6 ಒಳ ಮೀಸಲಾತಿ
(ಮಾದಿಗ, ಆದಿದ್ರಾವಿಡ, ಬಂಬಿ ಮತ್ತು ಇತರ ಸಂಬಂಧಿತ ಜಾತಿಗಳು)
ಗುಂಪು 2-ರಲ್ಲಿ
ಬಲಗೈ ಸಮುದಾಯದ ಗುಂಪಿಗೆ ಶೇ.5.5 ಒಳ ಮೀಸಲಾತಿ
(ಹೊಲೆಯ, ಆದಿಕರ್ನಾಟಕ, ಛಲವಾದಿ ಮತ್ತು ಇತರೆ ಸಂಬಂಧಿಸಿದ ಜಾತಿಗಳು)
ಗುಂಪು 3-ರಲ್ಲಿ
ಬಂಜಾರ, ಭೋವಿ, ಕೊರಚ, ಕೊರಮ (ಅಸ್ಪಶ್ಯರಲ್ಲದ) ಗುಂಪಿಗೆ ಶೇ.4.5 ಒಳ ಮೀಸಲಾತಿ
ಗುಂಪು 4-ರಲ್ಲಿ
ಅಲೆಮಾರಿ, ಅರೆ ಅಲೆಮಾರಿ, ಇತರೆ ಸಮುದಾಯಕ್ಕೆ ಶೇ.1 ಒಳ ಮೀಸಲಾತಿ
ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ..?
ಈ ಹಿಂದೆ ಘೋಷಣೆ ಮಾಡಿದಂತೆ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ
ಲಿಂಗಾಯಿತ ಸಮುದಾಯಕ್ಕೆ 2D ಶೇ. 7 ರಷ್ಟು ಮೀಸಲಾತಿ
ಒಕ್ಕಲಿಗ ಸಮುದಾಯಕ್ಕೆ (ಪ್ರವರ್ಗ 2ಸಿ) ಶೇಕಡಾ 6 ರಷ್ಟು ಮೀಸಲಾತಿ
ಪ್ರವರ್ಗ ಒಂದಕ್ಕೆ 4 % ಮೀಸಲಾತಿ
ದಲಿತ ಎಡ ಸಮುದಾಯಕ್ಕೆ 6% ಮೀಸಲಾತಿ
ದಲಿತ ಬಲ ಸಮುದಾಯಕ್ಕೆ 5.5% ಮೀಸಲಾತಿ
ಬೋವಿ ಲಂಬಾಣಿ ಸಮುದಾಯಕ್ಕೆ (sc) 4.5% ಮೀಸಲಾತಿ
ಅಲೆಮಾರಿ ಸಣ್ಣ ಜಾತಿಗಳಿಗೆ 1% ಮೀಸಲಾತಿ
ಬಿಜೆಪಿ ನೇತೃತ್ವದ ಸರ್ಕಾರದ ಕೊನೆಯ ಹಂತದಲ್ಲಿ ದೊಡ್ಡ ನಿರ್ಧಾರ ಮಾಡಿದೆ. ಮುಸ್ಲಿಂ ಮೀಸಲಾತಿಗೆ ಕೊಕ್ ಕೊಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರವರ್ಗ-1 ಹಾಗೂ ಪ್ರವರ್ಗ-2ರಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿದೆ. ಆ ಮೀಸಲಾತಿಯನ್ನು ತೆಗೆದು ಅವರನ್ನು ಆರ್ಥಿಕ ಹಿಂದುಳಿದ ಸಮುದಾಯದಡಿ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಪ್ರವರ್ಗ 2ಬಿ ರದ್ದು ಮಾಡಲಾಗಿದೆ. ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಕೂಡ ಏರಿಕೆಯಾಗಿದೆ. ಸದ್ಯ 3ಎ ಪ್ರವರ್ಗದಡಿ 4% ಒಕ್ಕಲಿಗರು ಮೀಸಲಾತಿ ಪಡೆಯುತ್ತಿದ್ದಾರೆ. 3ಎ ಪ್ರವರ್ಗ ರದ್ದು ಮಾಡಿ 2ಸಿ ಪ್ರವರ್ಗ ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಈ ಪ್ರವರ್ಗದ ಮೂಲಕ ಹೆಚ್ಚುವರಿಯಾಗಿ 2% ಮೀಸಲಾತಿ ನೀಡಲು ಸರ್ಕಾರದ ಲೆಕ್ಕಾಚಾರ. ಇದರಿಂದ 2ಸಿ ಮೂಲಕ ಮೀಸಲಾತಿ ಪ್ರಮಾಣ 6% ಕ್ಕೆ ಏರಿಕೆಯಾಗಿದೆ.
ಒಟ್ನಲ್ಲಿ, ಚುನಾವಣೆ ಹೊತ್ತಲ್ಲೇ ಮೀಸಲಾತಿ ಗಿಫ್ಟ್ ಕೊಟ್ಟು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ.
2d ಅಡಿಯಲ್ಲಿ ಲಿಂಗಾಯತರಿಗೆ ಶೇ.7 ರಷ್ಟು ಮೀಸಲಾತಿ
ಪಂಚಮಸಾಲಿ ಸೇರಿ ಲಿಂಗಾಯತ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿ
2ಸಿ ಅಡಿ ಒಕ್ಕಲಿಗರಿಗೆ ಶೇ.6ರಷ್ಟು ಮೀಸಲಾತಿಗೆ ನಿರ್ಧಾರ
ಅಸ್ಪ್ರಶ್ಯರಲ್ಲದ ಗುಂಪಿಗೆ ಶೇ.4.5ರಷ್ಟು ಮೀಸಲಾತಿ
ಹಿಂದುಳಿದ ಪ್ರವರ್ಗ-1ಕ್ಕೆ ಶೇ. 4ರಷ್ಟು ಮೀಸಲಾತಿ
ಓಬಿಸಿ ಪಟ್ಟಿಯನ್ನು 10 ವರ್ಷಕ್ಕೊಮ್ಮೆ ಪರಮಾಮರ್ಶೆ
ಸರ್ಕಾರದಿಂದ ಮುಸ್ಲಿಮರಿಗಿದ್ದ 2 ಬಿ ಮೀಸಲಾತಿ ರದ್ದು
ಆರ್ಥಿಕವಾಗಿ ಹಿಂದುಳಿದ ಪಟ್ಟಿಗೆ ಮುಸ್ಲಿಮರು ಶಿಫ್ಟ್
ಮುಸ್ಲಿಂ ಸಮುದಾಯದ ಶೇ.4 ರಲ್ಲಿ ಶೇ.2ರಷ್ಟು 2 ಸಿಗೆ
ಎಸ್ಸಿಯಲ್ಲಿ ಇತರೆ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿ