ಪಿಎಸ್‌ಐ ಹಗರಣ; ನನ್ನದೇನೂ ತಪ್ಪಿಲ್ಲ ಎಂದ ಶಾಸಕ ಬಸವರಾಜ ದಡೇಸೂಗೂರು
ಬೆಂಗಳೂರು; ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ ಎಂದು ಶಾಸಕ ಬಸವರಾಜ ದಡೇಸೂಗೂರು ಸ್ಪಷ್ಟೀಕರಣ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪಿಎಸ್‍ಐ ಹಗರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಮಾಧ್ಯಮದಲ್ಲಿ ಬಂದಿರುವ ಆಡಿಯೋ 2020ರದ್ದು. ಪಿಎಸ್ಐ ಹಗರಣಕ್ಕೂ ಅದಕ್ಕೂ ಸಂಬಂಧ ಇಲ್ಲ. ನಮ್ಮ ಕ್ಷೇತ್ರದ ಮಾಜಿ ಶಾಸಕರು ನಾನು ಯಾವಾಗ್ಯಾವಗಲೋ ಮಾತಾಡಿರೋದನ್ನು ಕಟ್ ಮಾಡಿ ವೀಡಿಯೋ ಮಾಡಿದ್ದಾರೆ. ಎಡಿಟ್ ಮಾಡಿರುವ ಆಡಿಯೋ ಅದು. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.