BengaluruPolitics

ದುಡ್ಡು ಹೊಡೆದು ಜೈಲಿಗೆ ಹೋದ ಎಂದು ನಮ್ಮವರೇ ಅಂದರು; ಡಿ.ಕೆ.ಶಿವಕುಮಾರ್‌

ಬೆಂಗಳೂರು; ನಾನು ಜೈಲಿಗೆ ಹೋಗಿದ್ದಕ್ಕೆ ನಮ್ಮವರೇ ನನ್ನ ವಿರುದ್ಧ ಮಾತನಾಡಿಕೊಂಡರು. ಪುಕ್ಸಟ್ಟೆ ಜೈಲಿಗೆ ಹೋದ್ನಾ..? ದುಡ್ಡು ಹೊಡೆದು ಜೈಲಿಗೆ ಹೋದ ಎಂದು ಮಾತನಾಡಿಕೊಂಡರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನೂತನ ಶಾಸಕರಿಗೆ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ನನ್ನ ಜೊತೆಯಲ್ಲಿದ್ದವರೇ ನನ್ನ ಬಗ್ಗೆ ಮಾತನಾಡಿದರು ಎಂದರು.

ನಾನು ಯಾರ ಜೊತೆ ಕೆಲಸ ಮಾಡಿದ್ದೆನೋ, ನಾನು ಯಾರ ಜೊತೆ ಇದ್ದೆನೋ ಅವರೇ ನನ್ನ ವಿರುದ್ಧ ಮಾತನಾಡಿದರು. ದುಡ್ಡು ಹೊಡೆದಿದ್ದಾನೆ ಎಂದರು. ನನ್ನ ಬಗ್ಗೆ ಡೈಲಾಗ್‌ಗಳನ್ನು ಹೊಡೆದರು. ಅದರ ಬಗ್ಗೆ ಈಗ ನಾನು ಚರ್ಚೆ ಮಾಡೋದಕ್ಕೆ ಹೋಗೋದಿಲ್ಲ ಎಂದ ಡಿ.ಕೆ.ಶಿವಕುಮಾರ್‌, ಹಾಗೆ ಮಾತನಾಡಿದವರು ಯಾರು ಅನ್ನೋದನ್ನು ಮಾತ್ರ ಹೇಳಲಿಲ್ಲ.

Share Post