ಇಂದಿನಿಂದ ನೈಟ್ ಕರ್ಪ್ಯೂ: ಅನಗತ್ಯ ಓಡಾಟಕ್ಕೆ ಬ್ರೇಕ್
ಬೆಂಗಳೂರು: ಡಿಸೆಂಬರ್ 28 ರಿಂದ ಜನವರಿ 7ರವರೆಗೆ ರಾಜ್ಯಾದ್ಯಂತ ನೈಟ್ ಕರ್ಪ್ಯೂ ವಿಧಿಸಲಾಗಿದೆ. ರಾತ್ರಿ 10ಗಂಟೆಯಿಂದ ಬೆಳಗಿನ ಜಾವ 5ರವರೆಗೆ ಕರ್ಪ್ಯೂ ಜಾರಿಯಲ್ಲಿರಲಿದೆ. ಕೊರೊನಾ, ಓಮಿಕ್ರಾನ್ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ತಜ್ಞರ ಸಲಹೆ ಮೇರೆಗೆ ಸಿಎಂ ಬಸವರಾಜ್ ಬೊಮ್ಮಾಯಿಯವರು ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದಾರೆ.
ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನೈಟ್ ಕರ್ಪ್ಯೂ ಜಾರಿಯಾಗಲಿದೆ. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗಿದ್ದು. ಸುಖಾಸುಮ್ಮನೆ ವಿರುದ್ಧ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ರು. ಇನ್ನು ಎಲ್ಲಾ ಜಿಲ್ಲಾಧಿಕಾರಿಗಳು ಇದರ ಹೊಣೆ ಹೊತ್ತಿದ್ದು ನಿಯಮ ಉಲ್ಲಂಘನೆಯಾಗದಂತೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹೊಸ ವರ್ಷಾಚರಣೆಗೆ ಕುಣಿದು ಕುಪ್ಪಳಿಸುವ ಆಸೆಗೆ ಸರ್ಕಾರ ತಣ್ಣೀರೆರಚಿದೆ.
ಇಂದು ರಾತ್ರಿ ೧೦ ಗಂಟೆಯಿಂದ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಿದ್ದಾರೆ. ಹೊಟೇಲ್, ರೆಸ್ಟೋರೆಂಟ್, ಬಾರ್, ಪಬ್, ಸಿನಿಮಾ ಥಿಯೇಟರ್, ಮಾಲ್ ಎಲ್ಲದಕ್ಕೂ ಬೀಗ ಬೀಳಲಿದೆ.
ಯಾವುದಕ್ಕೆಲ್ಲಾ ಅನುಮತಿ ಇದೆ
೧. ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಇಲ್ಲ, ಕೆಎಸ್‌ಆರ್‌ಟಿಸಿ, ರೈಲು, ವಿಮಾನ ಸಂಚಾರ ಎಂದಿನಂತೆ ಇರುತ್ತದೆ
೨. ಟಿಕೆಟ್ ತೋರಿಸಿ ಪ್ರಯಾಣಿಕರು ಪ್ರಯಾಣ ನಡೆಸಬಹುದು
೩. ತುರ್ತು ಸೇವೆಗಳು-ಆಸ್ಪತ್ರೆ, ಮೆಡಿಕಲ್ ಶಾಪ್ ಲಭ್ಯ ವಿರುತ್ತದೆ
೪. ಫುಡ್ ಡೆಲಿವರಿ, ಕ್ಯಾಬ್ ಫೆಸಿಲಿಟಿ, ಅಗತ್ಯ ಸೇವೆಗಳಿಗೆ ಅನುಮತಿ