ವಿಧಾನಸಭೆ ಕಲಾಪದಲ್ಲಿ ಮುಂದುವರೆದ ಕಾಂಗ್ರೆಸ್ ಗದ್ದಲ-ವಿಧೇಯಕಗಳ ಮಂಡನೆ
ಬೆಂಗಳೂರು: ವಿಧಾನಸಭೆಯಲ್ಲಿ ಇಂದೂ ಕೂಡ ಕಾಂಗ್ರೆಸ್ ನಾಯಕರ ಧರಣಿ ಮುಂದುವರೆದಿದೆ. ಕಾಂಗ್ರೆಸ್ ಗದ್ದಲ ಗಲಾಟೆ ನಡುವೆಯೇ ಹಲವು ವಿಧೇಯಕಗಳನ್ನು ಮಂಡನೆ ಮಾಡಿದ್ದಾರೆ. ಅದರಲ್ಲಿ 2022ಸಾಲಿನ ವಿಧಾನಮಂಡಲಗಳ ವೇತನ, ಭತ್ಯೆ, ನಿವೃತ್ತಿ ವೇತನ ತಿದ್ದುಪಡಿ ವಿಧೇಯಕವನ್ನು ಕಾನೂನು ಸಚಿವ ಮಾಧುಸ್ವಾಮಿ ಮಂಡನೆ ಮಾಡಿದ್ದಾರೆ. ಶಾಸಕರ ವೇತನ ಭತ್ಯೆಗಳು ಕಡಿಮೆ ಇದೆ ಹಾಗಾಗಿ ಈ ವಿಧೇಯಕವನ್ನು ಮಂಡನೆ ಮಾಡುತ್ತಿದ್ದೇನೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ರು. ಇದಕ್ಕೆ ಸದನದ ಅನುಮತಿ ಕೂಡ ಸಿಕ್ಕಿದೆ.
ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಹಠ ಹಿಡಿದ್ರು. ಇದರ ನಡುವೆಯೇ ಆಡಳಿತ ಪಕ್ಷ ಹಲವು ವಿಧೇಯಕಗಳನ್ನು ಮಂಡನೆ ಮಾಡಿದ್ದಾರೆ. ಸರ್ಕಾರದ ಈ ನೀತಿಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ರು.