KARNATAKA BUDGET LIVE; ಸಿದ್ದರಾಮಯ್ಯ ಅವರಿಂದ ಬಜೆಟ್ ಮಂಡನೆ; ಮುಖ್ಯಾಂಶಗಳು ಇಲ್ಲಿವೆ
ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು 2023-24 ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಕೇಂದ್ರದ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಲು ನಿರ್ಧಾರ
1411 ಕೋಟಿ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟನೆ ಮೇಲ್ದರ್ಜೆಗೆ ಏರಿಸಲಾಗುತ್ತದೆ
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತದೆ
1 ರಿಂದ 10ನೇತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತದೆ
ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆಗೆ ಬ್ರಾಂಡಿಂಗ್
ರೇಷ್ಮೆ ನೂಲು ತೆಗೆಯುವವರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ
ಎರಡನೇ ಹಂತದಲ್ಲಿ ಹೊಸ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರಯಲಾಗುತ್ತದೆ
ಗೃಹಜ್ಯೋತಿ ಯೋಜನೆಗೆ 13 ಸಾವಿರದ 910 ಕೋಟಿ ರೂಪಾಯಿ ವಾರ್ಷಿಕವಾಗಿ ಖರ್ಚಾಗಲಿದೆ
ಹಿಂದಿನ ಸರ್ಕಾರದ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯವನ್ನು ಕೈಬಿಡಲು ನಿರ್ಧಾರ ಮಾಡಲಾಗಿದೆ
8311 ಶಾಲಾ ಕೊಠಡಿಗಳ ನಿರ್ಮಾಣಕ್ಕೆ 550 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ
ಕಲಬುರಗಿಯಲ್ಲಿ ತಾಯಿ-ಮಗು ಆಸ್ಪತ್ರೆ ನಿರ್ಮಾಣಕ್ಕೆ 70 ಕೋಟಿ ರೂಪಾಯಿ ಅನುದಾನ
ಕೊಪ್ಪಳ, ಕಾರವಾರ ಹಾಗೂ ಕೊಡಗಿನಲ್ಲಿ ಜಿಲ್ಲಾಸ್ಪತ್ರೆಗಳ ಉನ್ನತೀಕರಣ ಮಾಡಲಾಗುತ್ತದೆ
ಮೈಸೂರು, ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ
ಕನಕಪುರ ತಾಲ್ಲೂಕಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ
ಮೀನುಗಾರಿಕೆ ಬೋಟ್‌ಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ವಿತರಣೆ ಮಾಡಲಾಗುತ್ತದೆ
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮೀ ಯೋಜನೆ
ಕೃಷಿ ಮೌಲ್ಯವರ್ದನೆ ಘಟಕಗಳು ಹಾಗೂ ಮಾರುಕಟ್ಟೆ ಅಭಿವೃದ್ಧಿ ಮಾಡಲಾಗುತ್ತದೆ
ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ ಮಾಡಲಾಗುತ್ತದೆ
ಕುರಿ, ಮೇಕೆ ಮೃತಪಟ್ಟರೆ ಐದು ಸಾವಿರ ರೂಪಾಯಿ ಸಹಾಯಧನ
ಮೆಟ್ರೋ ಹಾಗೂ ಉಪನಗರ ರೈಲಿಗೆ 30 ಸಾವಿರ ಕೋಟಿ ರೂಪಾಯಿ
ವೈಟ್ ಟಾಪಿಂಗ್, ರಸ್ತೆ ಅಭಿವೃದ್ಧಿ, ನಗರೋತ್ಥಾನ ಸೇರಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಅನುದಾನ
ಬೆಂಗಳೂರು ಅಭಿವೃದ್ಧಿಗೆ 45 ಸಾವಿರ ಕೋಟಿ ರೂಪಾಯಿ ಅನುದಾನ
ಇಂದಿರಾ ಕ್ಯಾಂಟೀನ್‌ಗೆ 100 ಕೋಟಿ ರೂಪಾಯಿ ಅನುದಾನ
5 ಗ್ಯಾರೆಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂಪಾಯಿ
100 ರೈತ ಉತ್ಪಾದಕ ಸಂಸ್ಥೆಗಳಿಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ
20 ಲಕ್ಷದವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ
ಕಿರು ಆಹಾರ ಸಂಸ್ಕೃಣೆ ಮಾಡುವವರಿಗೆ 5 ಕೋಟಿ ರೂಪಾಯಿ ಅನುದಾನ
ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡಲಾಗುತ್ತದೆ
ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆಗೆ 10 ಕೋಟಿ ರೂಪಾಯಿ
ಲೋಕೋಪಯೋಗಿ ಇಲಾಖೆಗೆ 10 ಸಾವಿರದ 143 ಕೋಟಿ ರೂಪಾಯಿ ಅನುದಾನ
ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರದ 173 ಕೋಟಿ ರೂಪಾಯಿ ಅನುದಾನ
ಆಹಾರ ಇಲಾಖೆಗೆ 10 ಸಾವಿರದ 460 ಕೋಟಿ ರೂಪಾಯಿ ಅನುದಾನ
ಕೃಷಿ ಉದ್ಯಮ ಉತ್ತೇಜಿಸಲು ನವೋದ್ಯಮ ಯೋಜನೆಗೆ 10 ಕೋಟಿ ರೂಪಾಯಿ
ಅನುಗ್ರಹ ಯೋಜನೆಯನ್ನು ಮರುಜಾರಿ ಮಾಡಲಾಗುತ್ತದೆ
ಹಸು, ಎತ್ತು, ಎಮ್ಮೆ ಮೃತಪಟ್ಟರೆ 10 ಸಾವಿರ ರೂಪಾಯಿ ಪರಿಹಾರ
ನಮ್ಮ ಮೆಟ್ರೋಗೆ 30 ಸಾವಿರ ಕೋಟಿ ರೂಪಾಯಿ
ಕೃಷಿಭಾಗ್ಯ ಯೋಜನೆ ಮನ್ರೇಗಾ ಅಡಿಯಲ್ಲಿ 100 ಕೋಟಿ ರೂಪಾಯಿ ಅನುದಾನ
75 ಕೋಟಿ ರೂಪಾಯಿ ವೆಚ್ಚದಲ್ಲಿ ಶಿಡ್ಲಘಟ್ಟ ಹಾಗೂ ರಾಮನಗರದಲ್ಲಿ ರೇಷ್‌ಮೆ ಮಾರುಕಟ್ಟೆ ಆಧುನೀಕರಣ
ಗ್ಯಾರೆಂಟಿ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿ ಖರ್ಚಾಗಲಿದ್ದು, ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ ತಲುಪಲಿದೆ
ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆಗೆ 10 ಕೋಟಿ ರೂಪಾಯಿ
ಅಬಕಾರಿ ತೆರಿಗೆ ಶೇಕಡಾ 20ರಷ್ಟು ಹೆಚ್ಚಳ
ಬಿಯರ್ ಮೇಲಿನ ಅಬಕಾರಿ ಸುಂಕ ಶೆಕಡಾ 10ರಷ್ಟು ಹೆಚ್ಚಳ
ಆರ್ಥಿಕ ಸಮೃದ್ಧಿ ಕರ್ನಾಟಕ ಜನರ ಆಶಯವಾಗಿದೆ
3 ಲಕ್ಷ 27 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸುತ್ತಿದ್ದೇವೆ
ಸಮಾನ ಅವಕಾಶಗಳ ಸೃಜನೆಯೇ ನಮ್ಮ ಧ್ಯೇಯವಾಗಿರುತ್ತದೆ
ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವೇ ನಮ್ಮ ಗುರಿಯಾಗಿದೆ
ಬಸವಣ್ಣ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿಸಿಕೊಂಡು ಬಜೆಟ್ ಮಂಡಿಸುತ್ತಿದ್ದೇವೆ
ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ನಾನು ಬಜೆಟ್ ಮಂಡಿಸುತ್ತಿದ್ದೇನೆ
ಇದು ನಾನು ಮಂಡಿಸುತ್ತಿರುವ 14ನೇ ಬಜೆಟ್
ನನ್ನ ಹಿಂದಿನ ಎಲ್ಲಾ ಆಯವ್ಯಯದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಮೂಲಮಂತ್ರಕ್ಕೆ ತಕ್ಕಂತೆ ಮಂಡಿಸಿದ್ದೇನೆ