BengaluruPolitics

ನಾನು ಹೊಂದಾಣಿಕೆ ರಾಜಕಾರಣ ಜೀವನದಲ್ಲೇ ಮಾಡಿಲ್ಲ; ಪ್ರತಾಪ ಸಿಂಹಗೆ ಬೊಮ್ಮಾಯಿ ಟಾಂಗ್‌

ಬೆಂಗಳೂರು; ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಜೊತೆ ಕೆಲ ಬಿಜೆಪಿ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿದ್ದರು. ಇದರಿಂದಾಗಿ ಕಾಂಗ್ರೆಸ್‌ಗೆ ಅಷ್ಟು ಸೀಟು ಬರಲು ಕಾರಣವಾಯ್ತು ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದರು. ಇದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನನ್ನ ಜೀವನದಲ್ಲಿ ನಾನು ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

ಸಂಸದ ಪ್ರತಾಪ ಸಿಂಹ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ. ಹೀಗಾಗಿ ಹೀಗೆ ಮಾತನಾಡಿದ್ದಾರೆ. ನಮ್ಮ ಸರ್ಕಾರದ ವೇಳೆ ನಾವು ಸಿದ್ದರಾಮಯ್ಯ ಅವರ ವಿರುದ್ಧ ಐದು ಕೇಸ್‌ ದಾಖಲಿಸಿದ್ದೇವೆ. 65 ಎಸಿಬಿ ಕೇಸ್‌ಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇವೆ ಎಂದು ಅವರು ಬೊಮ್ಮಾಯಿ ಹೇಳಿದರು. ನನಗೆ ಹೊಂದಾಣಿಕೆ ರಾಜಕೀಯದ ಅವಶ್ಯಕತೆ ಯಾಕೆ ಬೇಕು. ನಾನು ರಾಜಕೀಯವಾಗಿ ಪ್ರಾಮಾಣಿಕ ಎಂದು ಬೊಮ್ಮಾಯಿ ಹೇಳಿದ್ದಾರೆ.

Share Post