Bengaluru

ಹಿಜಾಬ್‌ ವಿವಾದ; ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ; ವಕ್ಪ್ ಬೋರ್ಡ್ ಅಧ್ಯಕ್ಷ

ಬೆಂಗಳೂರು: ಹಿಜಾಬ್‌ ವಿಚಾರವಾಗಿ ಹೈಕೋರ್ಟ್‌ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಚಿಂತನೆ ನಡೆಸಲಾಗುತ್ತಿದೆ ಎಂದು ವಕ್ಪ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಾದಿ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ತೀರ್ಪಿನ ಕುರಿತಂತೆ ಧರ್ಮದ ಮುಖಂಡರ ಜತೆ ಚರ್ಚೆ ನಡೆಯಲಿದೆ. ಎಲ್ಲರೂ ಶಾಂತ ರೀತಿಯಲ್ಲಿ ಇರುವಂತೆ ಕೋರಿಕೊಳ್ಳಲಾಗಿದೆ ಎಂದಿದ್ದಾರೆ. 

ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ ಸೌಹಾರ್ದತೆಯಿಂದ ವರ್ತನೆ ಮಾಡುವಂತೆ ಎಲ್ಲರಿಗೂ ಕೋರಿಕೊಳ್ಳಲಾಗಿದೆ. ಕಾನೂನಾತ್ಮಕವಾಗಿ ನಾವು ನಮ್ಮ ಹಕ್ಕನ್ನು ಪಡೆದು ಕೊಳ್ಳುತ್ತೇವೆ. ಹೈಕೋರ್ಟ್ ತೀರ್ಪು ಬಂದಿದೆ. ಮೂರು ಮಂದಿಯ ಜಡ್ಜ್ ನಲ್ಲಿ ಒಬ್ಬರು ಮುಸ್ಲಿಂ ಜಡ್ಜ್ ಕೂಡ ಇದ್ದರು. ಯಾವ ಆಧಾರದ ಮೇಲೆ ತೀರ್ಪು ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಹಿಜಾಬ್ ಕುರಾನ್ ನಲ್ಲಿ ಕಡ್ಡಾಯ ಅಂತ ಹೇಳಿದೆ. ಕುರಾನ್​ನ ಆದೇಶ ಕಡ್ಡಾಯವಲ್ಲ ಎಂದು ಕೋರ್ಟ್‌ ಹೇಳಿದೆ. ಹೀಗಾಗಿ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Share Post