Bengaluru

ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ರೈತನ ಬದುಕಿಗೋಸ್ಕರ, ಬೆಂಗಳೂರಿನ ಸುತ್ತಮುತ್ತಲಿನ ಜನರ ಕುಡಿಯುವ ನೀರಿಗಾಗಿ ʻನಮ್ಮ ನೀರು ನಮ್ಮ ಹಕ್ಕುʼ ಹೋರಾಟವನ್ನು  ಹಮ್ಮಿಕೊಂಡಿದ್ವಿ.  ತಾತ್ಕಾಲಿಕವಾಗಿ ಸರ್ಕಾರದ ಕಿರುಕುಳ, ಜನರ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೋರಾಟ ನಿಲ್ಲಿಸಿದ್ದೇವೆ. ನಿಯಮ ಸಡಿಲಿಕೆ ಆದ ಮೇಲೆ ಮತ್ತೆ ಪಾದಯಾತ್ರೆ ಶುರು ಮಾಡ್ತೇವೆ. ಜನರಿಗಾಗಿ ನಾವು ಮಾಡಿದ ಹೋರಾಟದಿಂದ ನಮ್ಮ ವಿರುದ್ಧವೇ ಎಫ್‌ಐಆರ್‌ ದಾಖಲು  ಮಾಡಿದ್ದಾರೆ. ಯಾರನ್ನೂ ಸುಮ್ಮನೆ ಬಿಡಲ್ಲ. ಎಲ್ಲದಕ್ಕೂ ಎಲ್ಲರಿಗೂ ತಕ್ಕ ಉತ್ತರ ನೀಡ್ತೇವೆ.

ನ್ಯಾಯಾಲಯ, ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯುತ್ತೇವೆ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದವರನ್ನು ಸುಮ್ಮನೆ ಬಿಡುವುದಿಲ್ಲ. ಈಗ ಹಳೆ ಕೇಸ್‌ಗಳನ್ನೆಲ್ಲಾ ತೆರೆದು ವಿಚಾರಣೆ ನಡೆಸುತ್ತಾರೆ. ನಾವು ಹಳೆ ಕೇಸ್‌ಗಳನ್ನೆಲ್ಲಾ ತೆರೆದು ತಕ್ಕ ಪಾಠ ಕಲಿಸುತ್ತೇವೆ. ನಾವು ಪಾದಯಾತ್ರೆ ವಿರುದ್ಧ ಮಾತ್ರ ಅಧಿಕಾರಿಗಳು ಕೇಸ್‌ ಹಾಕಿದ್ದಾರೆ. ಬಿಜೆಪಿ ನಾಐಕರ ವಿರುದ್ಧ ಯಾಕೆ ಹಾಕಿಲ್ಲ. ನಾನು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಕೊರೊನಾ ನಿಯಮಗಳು  ಸ್ವಲ್ಪ ಸಡಿಲಿಕೆ ಆಗಲಿ  50 ಜನ ಅಥವಾ 100 ಜನ ಸೇರಿದ್ರೂ ಪರವಾಗಿಲ್ಲ ನಾವು ಪಾದಯಾತ್ರೆ ಮಾಡ್ತೇವೆ ಎಂದರು.

Share Post