BengaluruPolitics

ಇಂದು ಕೆಪಿಸಿಸಿ ಅಧ್ಯಕ್ಷರ ಚುನಾವಣೆ; ಡಿಕೆಶಿ ಮರು ಆಯ್ಕೆ ಖಚಿತ

ಬೆಂಗಳೂರು; ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಇಂದು ಸಾಂಕೇತಿಕವಾಗಿ ಚುನಾವಣೆ ನಡೆಯಲಿದ್ದು, ಡಿ.ಕೆ.ಶಿವಕುಮಾರ್‌ ಮರುಆಯ್ಕೆಯಾಗುವುದು ಖಚಿತವಾಗಿದೆ. ಎರಡನೇ ಅವಧಿಗೆ ಡಿ.ಕೆ.ಶಿವಕುಮಾರ್  ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು, ಮಧ್ಯಾಹ್ನದೊಳಗೆ ಅಧಿಕೃತ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷರ ಅವಧಿ ಎರಡು ವರ್ಷಗಳು.  ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 2 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಸಾಂಕೇತಿಕ ಚುನಾವಣೆ ನಡೆಯಲಿದೆ. ಮಧ್ಯಾಹ್ನ 3.30 ಕ್ಕೆ ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಸಾಂಕೇತಿಕ ಚುನಾವಣೆ ಆಯೋಜನೆ ಮಾಡಲಾಗಿದೆ. ಯಾರೂ ನಾಮಪತ್ರ ಸಲ್ಲಿಸಿಲ್ಲದ ಕಾರಣ ಮಧ್ಯಾಹ್ನ ಸಭೆ ಸೇರಿ ಒನ್ ಲೈನ್ ರೆಸ್ಯೂಲೂಷನ್ ಪಾಸ್ ಮಾಡುವ ಸಾಧ್ಯತೆ ಇದೆ.

 

Share Post